ಮಳೆಯಿಂದಾಗಿ 5 ನೇ ಪಂದ್ಯ ರದ್ದು: ಭಾರತ -ದ.ಆಫ್ರಿಕಾ ಸರಣಿ ಸಮ

ಬೆಂಗಳೂರು, ಜೂ.19- ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಅಂತಿಮ‌ ಏಕದಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ.
ಇದರಿಂದಾಗಿ ಐದು ಪಂದ್ಯಗಳ ಸರಣಿ ಸಮಬಲದಲ್ಲಿ ಅಂತ್ಯಗೊಂಡಿದೆ.‌
ಸರಣಿ ನಿರ್ಣಾಯಕ‌ ಪಂದ್ಯ ವೀಕ್ಷಣೆಗಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ವರುಣ ನಿರಾಸೆ ಮೂಡಿಸಿದ್ದಾನೆ.
ಮಳೆಯಿಂದಾಗಿ ಆಟ ವಿಳಂಬವಾಗಿ ಆರಂಭವಾಯಿತು.‌ ಪಂದ್ಯವನ್ನು 19 ಓವರ್ ಗಳಿಗೆ ಸೀಮಿತಗೊಳಿಸಲಾಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, 3.2 ಓವರ್ ಗಳಲ್ಲಿ 28 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಮತ್ತೆ ಮಳೆ ಸುರಿಯಿತು.
ಐದು ಓವರ್ ಗಳ ಪಂದ್ಯವನ್ನಾಡಲು ಅಂಪೈರ್ ಗಳು ಪರಿಶೀಲನೆ ನಡೆಸಿದರಾದರೂ ವರುಣ ಬಿಡುವು ಕೊಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಪಡಿಸಲಾಯಿತು. ಅಂತಿಮ ಪಂದ್ಯ ಯಾವುದೇ ಫಲಿತಾಂಶ ಬರಲಿಲ್ಲ.
ಉಭಯ ತಂಡಗಳ ನಾಯಕರು ಟ್ರೋಫಿಯನ್ನು ಹಂಚಿಕೊಂಡರು.