ಮಳೆಯಿಂದಾಗಿ ಮನೆ ಗೋಡೆ ಕುಸಿತ

ಶಹಾಬಾದ:ಆ.1:ತಾಲೂಕಿನಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಮಧ್ಯಾ ರಾತ್ರಿ ಮುತ್ತಗಾ ಗ್ರಾಮದ ಮನೆಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ಮನೆ ಚಾವಣಿ ಹಾಗೂ ಗೋಡೆ ನೆಲಕ್ಕುರುಳಿ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಶನಿವಾರ ಸುರಿದ ಮಳೆಯಿಂದಾಗಿ ಮುತ್ತಗಾ ಗ್ರಾಮದ ನಿವಾಸಿಗಳಾದ ಬಸಮ್ಮ ಚಂದ್ರಾಮ ನಾಟೇಕಾರ ಎಂಬುವರ ಮನೆ ಗೋಡೆ ಕುಸಿದು ಆತಂಕವನ್ನುಂಟು ಮೂಡಿಸಿದೆ.

ಗೋಡೆ ಕುಸಿದ ಪರಿಣಾಮ ಕೆಲವರು ಪಕ್ಕದವರ ಮನೆಯಲ್ಲಿ ಕುಟುಂಬ ಆಶ್ರಯ ಪಡೆದಿದೆ. ಗೋಡೆ ಕುಸಿತದಿಂದ ಮನೆಯಲ್ಲಿ ದವಸ, ಧಾನ್ಯಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳು ಮಳೆಗೆ ಆಹುತಿಯಾಗಿವೆ.ತಕ್ಷಣವೇ ಗ್ರಾಮಸ್ಥರು ಮನೆ ಗೋಡೆ ಕುಸಿದ ಬಗ್ಗೆ ತಹಸೀಲ್ದಾರ ಹಾಗೂ ಗ್ರಾಮ ಲೆಕ್ಕಿಗರ ಗಮನಕ್ಕೆ ತಂದಿದ್ದಾರೆ.ರವಿವಾರ ರಜೆ ಇರುವುದರಿಂz ಅಧಿಕಾರಿಗಳು ಬೇಟಿ ನೀಡಿಲ್ಲ.ಆದರೆ ಸೋಮವಾರ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಗಮನಹರಿಸಿ ಮಳೆಯಿಂದಾಗಿ ಹಾನಿಗೊಳಗಾದ ಫಲಾನುಭವಿಗಳತ್ತ ಗಮನಹರಿಸಿ ಸೂಕ್ತ ಪರಿಹಾರ ನೀಡಿಸುವತ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.