ಮಳೆಯಲ್ಲಿ ಮುಜೀಬುದ್ದೀನ್ ಪ್ರಚಾರ

ರಾಯಚೂರು,ಏ.೨೯- ನಗರದ ವಾರ್ಡ್ ನಂಬರ್ ೨೨ ಮತ್ತು ೨೩ರಲ್ಲಿ ಮಳೆಯ ನಡುವೆ ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಮುಜೀಬುದ್ದೀನ್ ಅವರು ಅಬ್ಬರದ ಪ್ರಚಾರ ಕೈಗೊಂಡರು.
ನಗರದ ವಾರ್ಡ್ ೨೨ ಮತ್ತು ೨೩ ಸುಲ್ತಾನ್ ನೇತೃತ್ವದಲ್ಲಿ ಚುನಾವಣೆ ಪ್ರಚಾರ ನಡೆಯಿತು. ನೂರಾರು ಯುವಕರು ಮೆರವಣಿಗೆ ಮೂಲಕ ಮುಜೀಬುದ್ದೀನ್ ಅವರನ್ನು ಬರಮಾಡಿಕೊಂಡು ಮನೆ ಮನೆ ಪ್ರಚಾರ ಕೈಗೊಂಡರು.
ಪ್ರಚಾರದ ವೇಳೆ ಭಾರಿ ಮಳೆ ಸುರಿಯಿತು ಮಳೆಯನ್ನು ಲೆಕ್ಕಿಸದೇ ಮುಜೀಬುದ್ದೀನ್ ಅವರು ಚುನಾವಣೆಯ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಯುವ ಮುಖಂಡ ಸುಲ್ತಾನ್ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಕಿತ್ತು ಎಸೆದು ಪಕ್ಷೇತರ ಅಭ್ಯರ್ಥಿ ಯಾಗಿರುವ ಮುಜೀಬುದ್ದೀನ್ ಅವರಿಗೆ ಬೆಂಬಲಿಸಿ ಮತ ನೀಡಬೇಕೆಂದು ಮನವಿ ಮಾಡಿದರು. ಮಳೆಯೂ ಲೆಕ್ಕಸದೆ ಪ್ರಚಾರ ಕೈಗೊಂಡಿದ್ದು ಮುಜೀಬುದ್ದೀನ್ ಅವರ ಅಭಿಮಾನಿಗಳಿಗೆ ಭಾರಿ ಹುಮ್ಮಸ್ಸು ತಂದಿದೆ.
ಈ ವೇಳೆ ನೂರಾರು ಯುವಕರು ಸೇರಿದಂತೆ ಅನೇಕರು ಇದ್ದರು.