ಮಳೆಗೆ ಹಾನಿಯಾದ ಪ್ರದೇಶಗಳಿಗೆ ಶಾಸಕ ಭೇಟಿ


ಹರಿಹರ.ನ.20;  ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಬೆಳೆನಾಶ ಮನೆ ಕಳೆದುಕೊಂಡ ಪ್ರದೇಶಗಳಿಗೆ ಶಾಸಕ ಎಸ್ ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು ತಾಲ್ಲೂಕಿನಾದ್ಯಂತ ವರುಣನ ಆರ್ಭಟಕ್ಕೆ ತತ್ತರಿಸಿದ ಪಾಳ್ಯ.  ಯಲವಟ್ಟಿ .ಕೊಂಡಜ್ಜಿ ಗೋವಿನಳ .ಜಿ ಬೇವಿನಹಳ್ಳಿ .ಎಳೆ ಹೊಳೆ . ಕಮಲಾಪುರ .ಲಕ್ಕಶೆಟ್ಟಿಹಳ್ಳಿ .ಇತರೆ ಗ್ರಾಮಗಳಲ್ಲಿ ಅಧಿಕ ಬೆಳೆ ನಷ್ಟ ಮನೆ ಕಳೆದುಕೊಂಡ ಸ್ಥಳಗಳಿಗೆ ತೆರಳಿ ರೈತರು ಗ್ರಾಮಸ್ಥರೊಂದಿಗೆ ಮಳೆಯಿಂದ ನಷ್ಟ ತೊಂದರೆ ಆಗಿರುವ  ಬಗ್ಗೆ ಮಾಹಿತಿಯನ್ನು ಪಡೆದರು. ಶಾಸಕ ಎಸ್ ರಾಮಪ್ಪ ಮಾತನಾಡಿ ಅಕಾಲಿಕ ಮಳೆಯಿಂದಾಗಿ ಕೋಟ್ಯಂತರ ಮೌಲ್ಯದ ಬೆಳೆ ನಷ್ಟ ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ  ಸರ್ಕಾರಿ ಶಾಲೆಗಳಲ್ಲೂ ಜಲಾವೃತಗೊಂಡಿದೆ  ರೈತರಿಗೆ  ಸಂತ್ರಸ್ತರ ನೆರವಿಗೆ ಕೂಡಲೇ ಜಿಲ್ಲಾಧಿಕಾರಿಗಳು ಪರಿಹಾರ ದೊರಕಿಸಿಕೊಡುವುದಕ್ಕೆ ಮುಂದಾಗಬೇಕೆಂದು ಹೇಳಿದರು ಮಳೆಯಿಂದಾದ ಅನಾಹುತದ ಬಗ್ಗೆ  ಹೆಚ್ಚಿನ ಪರಿಹಾರ ದೊರಕಿಸಿ ಕೊಡುವದಕ್ಕೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ  ತಹಸೀಲ್ದಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಅನಾಹುತ ಆಗುವ ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲನೆ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಜನರಲ್ಲಿ ಜಾಗತಿ ಎಚ್ಚರಿಕೆ ಮೂಡಿಸುವಂತಹ ಕಾರ್ಯವನ್ನು ಅಧಿಕಾರಿಗಳ ತಂಡ ಮಾಡಬೇಕೆಂದು ಸೂಚನೆ ನೀಡಿದ್ದೇನೆ ಜಲಾವೃತ ಆಗುವಂಥ ತಗ್ಗು ಪ್ರದೇಶಗಳಲ್ಲಿ ಜನ ಜಾನುವಾರುಗಳು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು 

Attachments area