ಮಳೆಗೆ ಹತ್ತಿ ಹಾನಿ ಸ್ಥಳಕ್ಕೆ ಬಾರದ ಅಧಿಕಾರಿಗಳು

ಗಬ್ಬೂರು.ನ.6-ದೇವದುರ್ಗ ತಾಲೂಕಿನಯಾದ್ಯಂತ ಧಾರಕಾರವಾಗಿ ಸುರಿದ ಮಳೆಯಿಂದಾಗಿ ಹತ್ತಿ, ಭತ್ತ ಕಟಾವು ಹಂತಕ್ಕೆ ಬಂದಿದ್ದು ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೋಳಗಾಗಿವೆ.
ಯಂಕಟರೆಡ್ಡಿ ಬೂದಿನಾಳ ಗ್ರಾ.ಪಂ ಮಾಜಿ ಅಧ್ಯಕ್ಷರು ಅವರ 13 ಎಕರೆ 9ಗುಂಟೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದರು. ಆದರೆ ಮಳೆಗೆ ಬೆಳೆ ಸಂಪೂರ್ಣ ನೀರು ತುಂಬಿ ಕೊಳೆತು ಹೋಗಿದೆ. ಮಳೆ ಬಂದು ಒಂದು ತಿಂಗಳು ಗತಿಸಿದರು ಸ್ಥಳಕ್ಕೆ ಬಾರದ ಗ್ರಾಮ ಲೆಕ್ಕಾಧಿಕಾರಿಯಾದ ನಸೀರ್ ಹುಸೇನ್ ,ಅವರು ಗ್ರಾಮಕ್ಕೆ ಬಂದು ಸಮೀಕ್ಷೆ ಮಾಡಿಕೊಂಡು ಹೋಗಲು ಹೇಳಿದರೆ ಬಂದು ಪರಿಶೀಲನೆ ಮಾಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ಕಳೆದ ತಿಂಗಳಲ್ಲಿ ಮತ್ತು ವಾರದ ಹಿಂದೆ ಸುರಿದಿರುವ ಮಳೆಯಿಂದ ಹತ್ತಿ ಬೆಳೆಗೆ ಅತಿಯಾದ ತೇವಾಂಶ ಹೆಚ್ಚಾಗಿ ಫಲ ಮತ್ತು ಕಾಯಿ ಉದುರಿದೆ. ಇದರಿಂದ ರೈತರಿಗೆ ದಿಕ್ಕು ದೊಚದಂತಾಗಿದೆ. ಇನ್ನೂ ಕೆಲವು ಭಾಗಗಳಲ್ಲಿ ಹತ್ತಿ ಬೆಳೆ ಸಹ ಕೈಗೆ ಬಂದಿತ್ತು ಅದು ಸಹ ಮಳೆಯಿಂದ ನೆನೆದು ಹಾಳಾಗಿದೆ. ಇನ್ನೇನು ಭತ್ತ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಮಳೆ ಸುರಿದಿದ್ದರಿಂದ ರೈತರ ಪರಿಸ್ಥಿತಿ “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎನ್ನುವಂತಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ಹೊಲಗಳಿಗೆ ಬೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ಮಾಡಿಲ್ಲ ಎಂದು ರೈತನ ಮಗನಾದ ಯಂಕಟರೆಡ್ಡಿ ಗ್ರಾ.ಪಂ ಮಾಜಿ ಅಧ್ಯಕ್ಷರು ಅಧಿಕಾರಿಗಳ ವಿರುಧ್ಧ ಹರಿಹಾಯ್ದರು.