ಮಳೆಗೆ ಮುಳುಗಿದ ರೈನ್ಬೋ ಬಡಾವಣೆ

ಬೆಳ್ಳಂದೂರು ರಿಂಗ್ ರಸ್ತೆಯಲ್ಲಿ ಮಳೆಯ ಅವಾಂತರ

ಕೆ.ಆರ್.ಪುರ,ಸೆ.೧-ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಅವಾಂತರ ಗಳನ್ನೆ ಸೃಷ್ಟಿಸಿದೆ, ಮಹದೇವಪುರ ಕ್ಷೇತ್ರದ ಬೆಳ್ಳಂದೂರಿನ ,ರೈನ್ಬೋ ಬಡಾವಣೆ, ಇಕೋಸ್ಪೇಸ್ ರಿಂಗ್,ನಲ್ಲೂರಹಳ್ಳಿಯಲ್ಲಿ ಹೆಚ್ಚು ಅನಾಹುತ ಉಂಟುಮಾಡಿದೆ.ಮಳೆ ನಿಂತರು ಸಹ ಕಳೆದ ಎರಡು ದಿನಗಳಿಂದ ರಿಂಗ್ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಮಾಗಿದೆ.ನಲ್ಲೂರಹಳ್ಳಿ ಹಾಗೂ ರೈನ್ಬೋ ಬಡಾವಣೆಯಲ್ಲಿ ನೂರಾರು ವಾಹನಗಳಿಗೆ ಹಾನಿಯಾಗಿದ್ದು,ನಿವಾಸಿಗಳು ಕಂಗಾಲಾಗಿದ್ದಾರೆ.ನಲ್ಲೂರಹಳ್ಳಿ ನೀರಿನ ಪ್ರಮಾಣ ಖಾಲಿಯಾಗಿದ್ದು,ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ ಹಾಗೂ ಆದರೆ ರೈನ್ಬೋ ಬಡಾವಣೆಯಲ್ಲಿ ನೀರಿನ ಪ್ರಮಾಣದಲ್ಲಿ ನೀರು ನಿಂತಿದ್ದು ಅವಾಂತರ ಮುಂದುವರೆದಿದೆ.ಇಟಾಚಿ ವಾಹನದಿಂದ ಕಾರ್ಯಾಚರಣೆ ಮಾಡಲಾಗುತ್ತಿದ್ದು,ಹಂತಹಂತವಾಗಿ ಪರಿಹಾರ ಕಾರ್ಯ ನಡೆಯುತ್ತಿದೆ,

ಪ್ರತಿಭಟನೆ:
ಬೆಳ್ಳಂದೂರು ಇಕೋ ಸ್ಪೇಸ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಬತ್ತನಾಟಿ ಹಾಗೂ ಮೀನು ಹಿಡಿಯುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.ಮುಖ್ಯಮಂತ್ರಿಗಳ ಭೇಟಿ; ಮಾರತ್ತಹಳ್ಳಿಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಸಂಜೆ ಭೇಟಿ ನೀಡಲಿದ್ದು ಹರಿಹಾರ ಕಾರ್ಯಗಳ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.