ಮಳೆಗೆ ಮಾವಿನ ಫಸಲು ನಷ್ಟ

ಕೋಲಾರ,ಮೇ,೨೨:ಶ್ರೀನಿವಾಸಪುರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ ಸಹಿತ ಮಳೆಯು ರೈತರನ್ನು ಬದುಕನ್ನು ಬೀದಿಗೆ ತಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಕಳವಳ ವ್ಯಕ್ತ ಪಡೆಸಿದರು,
ಭಾನುವಾರ ಸಂಜೆ ಬಿದ್ದ ಮಳೆಯಿಂದ ರಾಮಕೃಷ್ಣ ರಸ್ತೆಯಲ್ಲಿ ತೆಂಗಿನ ಮರ ಮುರಿದು ಬಿದ್ದಿದೆ. ಶ್ರೀನಿವಾಸಪುರ ತಾಲೂಕಿನ ಯಲ್ದೂರು, ರೋಣೂರು, ಕಸಬಾ ಹೋಬಳಿ, ವಿಪರೀತ ಬಿರುಗಾಳಿ ಸಹಿತ ಮಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನಕಾಯಿ, ಟೊಮೆಟೋ ಮತ್ತು ಇತರೆ ಬೆಳೆಗಳು ನಷ್ಟವಾಗಿದೆ. ಅಲೆದುಳಿದ ಬೆಳೆಯು ಕಳೆದ ಎರಡು ದಿನಗಳಿಂದ ಬಿದ್ದ ಬಿರುಗಾಳಿ ಸಹಿತ ಮಳೆಯಿಂದ ಲಕ್ಷ್ಮಾಂತರ ಬೆಳೆಯು ನಷ್ಟವಾಗಿದೆ ತಿಳಿಸಿದರು.
ಕಳೆದ ೨ ತಿಂಗಳ ಹಿಂದೆ ಶೇ.೬೦ ಪ್ರದೇಶಗಳಲ್ಲಿನ ಮಾವಿನ ತೋಟಗಳಲ್ಲಿ ಪ್ರಾರಂಭ ದಿನಗಳಲ್ಲಿನ ಹೂವಿನ ಹಂತದಲ್ಲಿಯೇ ಬಿದ್ದ ಅಕಾಲಿಕ ಮಳೆಯಿಂದ ನಷ್ಟವಾಗಿತ್ತು. ಈ ಮಧ್ಯೆ ೨ ದಿನಗಳಿಂದ ಬಿದ್ದ ಬಿರುಗಾಳಿ ಸಹಿತ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿದ್ದು, ಸರ್ಕಾರ ಈ ಕೂಡಲೇ ರೈತರಿಗೆ ನಷ್ಟ ಪರಿಹಾರ ಕೊಡುವಂತೆ ಒತ್ತಾಯಿಸಿದರು.