ಮಳೆಗೆ ಮನೆಗಳು ಕುಸಿತ: ಲಕ್ಷಾಂತರ ರೂ. ನಷ್ಟ

ಅರಸೀಕೆರೆ, ಜು. ೨೧- ತಾಲ್ಲೂಕಿನಲ್ಲಿ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿವೆ. ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಬೆಳಗುಂಬ ಗ್ರಾಮದ ಕಾಳಮ್ಮ ಸಿದ್ಧಮರಿಯಪ್ಪ ಎಂಬುವರ ಮನೆ ಮಳೆಗೆ ಕುಸಿದು ಬಿದ್ದಿದೆ. ಆನೆನಹಳ್ಳಿ ಗ್ರಾಮದ ದೊಡ್ಡಯ್ಯ ಎಂಬವರ ಮನೆ ಹಾಗೂ ಬಾಣಾವರ ಹೋಬಳಿ ಬೆಂಡೆಕೆರೆ ತಾಂಡ್ಯದ ನಿಂಗಿಬಾಯಿ ಚಂದ್ರನಾಯಕ್, ರಂಗನಾಯಕನ ಕೊಪ್ಪಲು ಗ್ರಾಮದ ರಂಗಸ್ವಾಮಿ, ಲಕ್ಷ್ಮಮ್ಮ ರಂಗಪ್ಪ, ಹ೦ಕುರುಬರ ಹಟ್ಟಿ ಹುಲುಗಪ್ಪ, ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಜಯಣ್ಣ, ಜೆಸಿಪುರ ಗ್ರಾಮದ ಹರ್ಷಿಯ ತಬಸ್ಸುಮ್, ಚಿಕ್ಕಲ್ಲೂರು ಗ್ರಾಮದ ಗಂಗಮ್ಮ ಕೋಂ ರಂಗಪ್ಪ ಇವರುಗಳ ಮನೆಗಳು ಮಳೆಗೆ ಕುಸಿದು ಬಿದ್ದು, ಭಾರಿ ನಷ್ಟ ಉಂಟಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.