ಮಳೆಗೆ ಭತ್ತದ ಬೆಳೆಗೆ ಹಾನಿ

ಮಲೇಬೆನ್ನೂರು.ನ.೨೧:  ಸಮೀಪದ ಡಿ.ಬಿ.ಕೆರೆ ಡ್ಯಾಂ ಹಿನ್ನೀರಿನಿಂದ ಸುಮಾರು 500 ಎಕರೆ ಬೆಳೆದ ಭತ್ತ ಹಾನಿಯಾಗಿದೆ ಜಮೀನಿಗೆ ನೀರು ನುಗ್ಗಿ ಸುಮಾರು 12 ಹಳ್ಳಿಯ ಜನರಿಗೆ ತೊಂದರೆ ಉಂಟಾಗಿದೆ.ಅಪಾರ ಹಾನಿಯುಂಟಾದ ಹರಿಹರ ತಾಲೂಕಿನ ಕೊನೆಯ ಭಾಗವಾದ ಸಂಕ್ಲಿಪುರ ಗ್ರಾಮಕ್ಕೆ  ಶಾಸಕ ಎಸ್.ರಾಮಪ್ಪ ಭೇಟಿ ನೀಡಿ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂರ್ಪಕ ಮಾಡಿ ತುರ್ತು ಕ್ರಮಕ್ಕೆ ಆಗ್ರಹಿಸಿದರು.