ಮಳೆಗೆ ಬೆಳೆ ಹಾನಿ: ಶಾಸಕ ವೀಕ್ಷಣೆ

ಸಿರವಾರ,ಮೇ.೦೧- ಅಕಾಲಿಕವಾಗಿ ಸುರಿದ ಮಳೆಯಿಂದ ಹಾನಿಯಾದ ಭತ್ತವನ್ನು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಚುನಾವಣೆ ಪ್ರಚಾರಕ್ಕೆ ಬಿಡುವು ಮಾಡಿಕೊಂಡು ವಿಕ್ಷಣೆ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ತಾಲೂಕಿನ ಚಾಗಭಾವಿ ಗ್ರಾ.ಪಂ ವ್ಯಾಪ್ತಿಯಲ್ಲಿ ಭಾನುವಾರ ಬೆಳೆ ನಷ್ಟವಾದ ಬಗ್ಗೆ ವಿಕ್ಷಣೇ ಮಾಡಿದ ಅವರು ನಂತರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಅಕಾಲಿಕ ಮಳೆಯಿಂದ ಭತ್ತ ಹಾಳಾಗಿದೆ. ಇಲಿಯವರೆಗೂ ರೈತರ ಜಮೀನುಗಳಿಗೆ ಅಧಿಕಾರಿಗಳು ಆಗಮಿಸಿಲ್ಲ, ಕೂಡಲೇ ಬೆಳೆ ನಷ್ಟವಾಗಿರುವ ಬಗ್ಗೆ ಸರ್ವೆ ಮಾಡಿ ರೈತರಿಗೆ ಪರಿಹಾರ ನೀಡುವ ಮೂಲಕ ನೇರವಾಗಿ. ಕೇಲವು ಕಡೆ ಟಿನ್ ಶೇಡ್ ಹಾರಿ ಹೋಗಿವೆ ಅವುಗಳನ್ನು ಸರ್ವೆ ಮಾಡಿ ಎಂದರು. ಜಿಲ್ಲಾಧಿಕಾರಿಯವರು ಎರಡು ದಿನದಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಕಳಿಸಲಾಗುವುದು ಎಂದಿದ್ದಾರೆ.
ಜೆಡಿಎಸ್ ತಾಲೂಕ ಅದ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಹಿರಿಯ ಮುಖಂಡ ಜಿ.ಲೋಕರೇಡ್ಡಿ, ಖಲಿಲ್ ಕುರೇಶಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಚಾಗಭಾವಿ, ಪಿ.ರವಿಕುಮಾರ, ಚಂದ್ರಶೇಖರ ಯಲ್ಗೇರಿ, ದಾನಪ್ಪ, ಶಾಂತಪ್ಪ ಪಿತಗಲ್, ಚಿದಾನಂದ, ಸೇರಿದಂತೆ ಇನ್ನಿತರರು ಇದ್ದರು.