ಮಳೆಗೆ ಬೆಳೆ ನಾಶ : ಸರ್ಕಾರ ತುರ್ತು ಪರಿಹಾರ ಘೋಷಣೆಗೆ ಒತ್ತಾಯ

ರಾಯಚೂರು.ಡಿ.೦೧- ಅತಿಯಾದ ಮಳೆ, ಹವಮಾನ ವೈಪರಿತ್ಯದಿಂದಾಗಿ ಕಟ್ಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನೆಲೆಕಚ್ಚಿದ್ದು ರೈತರು ಸಂಕಷ್ಟದಲ್ಲಿದ್ದು ಕೂಡಲೇ ಸರ್ಕಾರ ತುರ್ತು ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮೈಕ್ರೋ ಹಣಕಾಸು ಸಂಸ್ಥೆ ಬ್ಯಾಂಕುಗಳ ಸಾಲ ವಸುಲಾತಿಗೆ ತಡೆ ಹಾಕಬೇಕು ಕೂಡಲೇ ಹೋಬಳಿ ಒಂದರಂತೆ ಭತ್ತದ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು. ಪ್ರಸ್ತುತಾ ಹಂಗಾಮಿನಲ್ಲಿ ಐತ್ತದ ಬೆಳೆ ಚೆನ್ನಾಗಿ ಬಂದಿದ್ದು ಇನ್ನೇನು ಕಟ್ಟಾವಿಗೆ ಬಂದು ರೈತರ ಬದುಕು ಹಸನಾಗುವಷ್ಟರಲ್ಲಿ ಹವಮಾನದಲ್ಲಿ ತೇವಾಂಶ, ಅತಿಯಾದ ಮಳೆಯಿಂದ ಭತ್ತದ ಬೆಳೆಯೂ ಸಂಪೂರ್ಣ ನೆಲೆ ಕಚ್ಚಿದ್ದು, ಅದರ ಜೊತೆಗೆ ಹತ್ತಿ, ಕಡಲೇ, ತೋಟಗಾರಿಕೆ ಇನ್ನಿತರ ಬೆಳೆಗಳು ಸಂಪೂರ್ಣ ನಾಶವಾಗಿದೆ ಎಂದು ದೂರಿದರು.
ರೈತರ ಜಮೀನಿನ ಸಾಗುವಳಿಗಾಗಿ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ವಿತರಣೆ ಮಾಡುತ್ತಿರುವ ಅಕ್ಕಿಯು ಗುಣಾತ್ಮಕ ಇರುವುದಿಲ್ಲ ಹಾಗೂ ಪೋಷಕಾಂಶವಿಲ್ಲದ ಹುಳವಿರುವ ಅಕ್ಕಿಯ ದಾಸ್ತಾನನ್ನಯ ಬೇರೆ ರಾಜ್ಯಗಳಿಂದ ಖರೀದಿಸುವ ಬದಲು ನಮ್ಮ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಗುಣಮಟ್ಟದ ಅಕ್ಕಿಯನ್ನು ಖರೀದಿಸಿ ವಿರಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ರಾಮಯ್ಯ ಜಾಳಗೇರಾ, ಶಿವರಾಜ ಸಾಸಲಮರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.