ಮಳೆಗೆ ಕೊಚ್ಚಿ ಹೋದ ರಸ್ತೆ

ಬಳ್ಳಾರಿ, ಜೂ.06; ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು. ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದ ರಸ್ತೆಯೊಂದರಲ್ಲಿ ನೀರು ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದೆ.
ರಸ್ತೆ ಬದಿಯಲ್ಲಿ ನೀರು ಹರಿದು ಹೋಗಲು ಮಾಡದ ಕಾರಣ ನೀರು ರಸ್ತೆಗೆ ‌ನುಗ್ಗಿ ರಸ್ತೆ ಹಾಳಾಗಲು ಕಾರಣವಾಗಿದೆ. ಅಷ್ಟೇ ಅಲ್ಲದೆ ಜಮೀನುಗಳಲ್ಲಿ ನಿರ್ಮಿಸಿದ ಬದುಗಳು ಸಹ ಕೊಚ್ಚಿಕೊಂಡು ಹೋಗಿವೆ.