ಮಳೆಗೆ ಕೆರೆಯಂತಾದ ಕಾಲೇಜು ಆವರಣ; ಸಂಚಾರಕ್ಕೆ ವಿದ್ಯಾರ್ಥಿಗಳ ಪರದಾಟ

ರಾಯಚೂರು,ಜು.೨೬- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಳೆ ನೀರು ನಿಂತು ಕೆರೆಯಂತಹ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಓಡಾಲು ಪರದಾಡುವಂತಾಗಿದೆ.
ಪ್ರತಿಬಾರಿ ಮಳೆಗಾಲ ಪ್ರಾರಂಭವಾದಾಗಲೂ ಇಲ್ಲಿ ಇಂತಹದೇ ಸಮಸ್ಯೆ ಎದುರಾಗುತ್ತಿದ್ದು, ಕಳೆದ ಬಾರಿ ಮಳೆನೀರು ಮುಖ್ಯ ಕಟ್ಟಡದ ಒಳಗಿನ ಪ್ರಾಂಗಣದಲ್ಲಿ ಶೇಖರಣೆಯಾಗಿ ಈಜುಕೊಳದಂತಾಗಿತ್ತು. ನಗರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇದರ ಬಗ್ಗೆ ಕಾಳಜಿ ವಹಿಸಿ ಆವರಣವನ್ನು ಎತ್ತರ ಮಾಡಬೇಕಿದೆ. ಇಲ್ಲದಿದ್ದರೆ ಮಳೆಗಾಲ ಮುಗಿಯುವವರೆಗೂ ವಿದ್ಯಾರ್ಥಿಗಳು ಓಡಾಡಲು ಇಲ್ಲಿ ನಿತ್ಯ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.