ಮಳೆಗೆ ಕೂಡ್ಲಿಗಿ ಪೊಲೀಸ ಠಾಣೆ ಸೋರಾಟ,ಕಡತಗಳ ಕಾಪಾಡಲು ಪೊಲೀಸರ ಪರದಾಟ.


ಬಿ ನಾಗರಾಜ. ಕೂಡ್ಲಿಗಿ.
ಕೂಡ್ಲಿಗಿ. ಜೂ.9 :- ಪಟ್ಟಣದ ಪೊಲೀಸ ಠಾಣೆಯು ಬ್ರಿಟಿಷ್ ಕಾಲದ ಕಟ್ಟಡವಾಗಿದ್ದು ಮಳೆ ಬಂದರೆ ಸಾಕು ಎಲ್ಲೆಂದರಲ್ಲಿ ಸೋರಾಟದ ಚಿತ್ರಣವೇ ಕಾಣುತ್ತಿದ್ದು ಇತ್ತ ಠಾಣೆಯ ಕಡತಗಳು ಹಾಳಾಗದಂತೆ ಕಾಪಾಡಲು ಪೊಲೀಸರ ಪರದಾಟವಂತು ಹೇಳತೀರದು.
ಕಳೆದ ಸಂಜೆ ಗುಡುಗು ಮಿಂಚಿನ ಸಹಿತ ಮಳೆಯ ಆರ್ಭಟ ಜೋರಾಗಿತ್ತು ಶತಮಾನ ಕಳೆದ  1896ರಲ್ಲಿ ನಿರ್ಮಾಣವಾಗಿರುವ ಬ್ರಿಟಿಷ್ ಕಾಲದ ಕಟ್ಟಡವೆಂದು ಹೇಳಲಾಗುವ ಕೂಡ್ಲಿಗಿ ಪಟ್ಟಣದ ಪೊಲೀಸ ಠಾಣೆಯ ಕಟ್ಟಡ ಅತ್ಯಂತ ಹಳೆಯ ಕಟ್ಟಡವಾಗಿದ್ದು ಮಳೆ ಬಂದರೆ ಎಲ್ಲೆಂದರಲ್ಲಿ ಸೋರಾಟವಾಗುತ್ತಿದ್ದು ಜನತೆಯನ್ನು ರಕ್ಷಿಸುವ ಆರಕ್ಷಕರಿಗೆ  ಠಾಣೆಯಲ್ಲಿ ಮಳೆಯ ಸೋರಾಟದಿಂದ ಕಟ್ಟಡ ಕುಸಿಯಿವ ಭಯದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಸಿಪಿಐ ಕಚೇರಿ, ಪಿಎಸ್ಐ ಕಚೇರಿ ಹಾಗೂ ರೈಟರ್ ಇರುವ ಮತ್ತು ದಾಖಲೆಗಳಿರುವ ಕೊಠಡಿಗಳು ಸೋರುತ್ತಿದ್ದೂ ಈ ಕಡತಗಳ ರಕ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಪರದಾಟ ಹೇಳತೀರದಾಗಿದೆ ಅಲ್ಲದೆ ಹಳೇ ಕಟ್ಟಡದಿಂದ ಮುಕ್ತಿ ಯಾವಾಗ ಎಂದು ಪೊಲೀಸರು ಗೋಳಾಡುತ್ತಿದ್ದಾರೆ.

ಮುಕ್ತಿ ಯಾವಾಗ ನೂತನ ಶಾಸಕರೇ : ಶತಮಾನದ ಬ್ರಿಟಿಷ್ ಕಾಲದ ಕಟ್ಟಡವಾಗಿರುವ ಕೂಡ್ಲಿಗಿ ಪೊಲೀಸ್ ಠಾಣೆ ಇಡೀ ಕರ್ನಾಟಕದಲ್ಲೇ ಹಳೆಯ ಕಟ್ಟಡವೆಂದರೆ ತಪ್ಪಾಗದು ಮಿನಿ ವಿಧಾನಸೌಧ ನಿರ್ಮಾಣ ಸಂದರ್ಭದಲ್ಲಿ ಪೊಲೀಸ್ ಠಾಣೆಗೂ ಮುಕ್ತಿ ಸಿಗಬಹುದೇನೋ ಅಂದುಕೊಂಡಿದ್ದರೂ ಪೊಲೀಸ್ ನೂತನ ಕಟ್ಟಡಕ್ಕೆ ಭಾಗ್ಯ ದೊರೆಯದೆ ಹಾಗೇ ಮುಂದುವರೆಸಲಾಯಿತು ಇತ್ತೀಚಿಗೆ ಬಂದ ವಿಜಯನಗರ ಎಸ್ಪಿ ಶ್ರೀಹರಿಬಾಬು ಸಹ ಕಟ್ಟಡದ ಚಿತ್ರಣವನ್ನೇ ಕಣ್ಣಾರೆ ನೋಡಿ ಹೋಗಿದ್ದಾರೆ. ಕಳೆದ ಸಾಲಿನಲ್ಲಿ ಶಾಸಕರಾಗಿದ್ದ ಎನ್ ವೈ ಗೋಪಾಲಕೃಷ್ಣ ಅವರು ಕೂಡ್ಲಿಗಿ ಪೊಲೀಸ್ ಠಾಣೆಗೆ 4ಕೋಟಿ ರೂ ವೆಚ್ಚದ ಕಟ್ಟಡಕ್ಕೆ ಡಿಎಂಎಫ್ ಹಣಕ್ಕೆ ಪತ್ರ ವ್ಯವಹಾರ ಮಾಡಲಾಗಿತ್ತಾದರೂ ಅನುದಾನ ನೀಡುವಲ್ಲಿ ವಿಳಂಬವಾಗಿದ್ದರಿಂದ ಮುಕ್ತಿ ದೊರಕದಂತಾಯಿತು ಈಗ ಮತ್ತೇ ನೂತನ ಶಾಸಕರಾದ ಡಾ ಶ್ರೀನಿವಾಸ ಸ್ಥಳೀಯರೇ ಆಗಿದ್ದು ಈ ಸೋರಾಟದ ಪೊಲೀಸ್ ಠಾಣೆಯ ಹಳೇ ಕಟ್ಟಡಕ್ಕೆ ಮುಕ್ತಿ ಕಾಣಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ನೂತನ ಶಾಸಕರು ಮುಂದಾಗುವರೆ ಕಾದು ನೋಡಬೇಕಿದೆ.
ಪಟ್ಟಣದ ಪೊಲೀಸ್ ಠಾಣೆಯ ಕಟ್ಟಡ ತುಂಬಾ ಹಳೆಯದಾಗಿದ್ದು ಮಳೆ ಬಂದರೆ ನನ್ನ ಕೋಣೆಯಲ್ಲೂ ಸೋರುತ್ತಿದ್ದೂ ಕಡತವಿರುವ ಬಿರುವೋಗಳು ಸಹ ಹಾಳಾಗುತ್ತಿವೆ ಮೇಲ್ಚಾವಣಿ ಸಿಮೆಂಟ್ ರಾಡುಗಳು ತುಕ್ಕುಹಿಡಿದಂತೆ ಕಾಣುತ್ತಿದ್ದು ಸಿಮೆಂಟ್ ಅಕ್ಕಳಿಕೆ ಬೀಳುತ್ತೀವೆ ಕಟ್ಟಡದಿಂದ ಅಪಾಯವಾಗುವ ಮೊದಲು ನೂತನ ಕಟ್ಟಡ ನಿರ್ಮಾಣವಾಗಬೇಕಿದೆ ಈಗಾಗಲೇ ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಎಂದು ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ತಿಳಿಸಿದರು.