ಮಳೆಗೆ ಕುಸಿದಮನೆ; ಪರಿಹಾರ ಕೋರಿ ಮನವಿ

ಹೊನ್ನಾಳಿ.ಮೇ.೯;  ಕಳೆದ  ರಾತ್ರಿ ಗುಡುಗು ಸಿಡಿಲು ಬಿರುಗಾಳಿಯಿಂದ ಕೂಡಿದ ಮಳೆಯಿಂದಾಗಿ ಹೊನ್ನಾಳಿಯ ಸೊಪ್ಪಿನ ಕೇರಿಯಲ್ಲಿ ಗೌರಮ್ಮ ಕೆಂಚಪ್ಪ ಎಂಬವರಿಗೆ ಸೇರಿದ ಮನೆ ಗೋಡೆ ರಾತ್ರಿ ಬಿದ್ದಿದ್ದು ಮನೆಯೊಳಗಿದ್ದ ಗೌರಮ್ಮ, ಕೆಂಚಪ್ಪ ಮತ್ತು ಮಗ ಮಲಗಿದ್ದ ಸಮಯದಲ್ಲಿ ಗೋಡೆ ಬೀಳುವ ಸಂದರ್ಭದಲ್ಲಿ ಎಚ್ಚರವಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ ಮನೆಯ ಗೋಡೆ ಹೊರಗೆ ಬಿದ್ದಿದ್ದರಿಂದ ಯಾರಿಗೂ ಯಾವ ಅಪಾಯವು ಆಗಿಲ್ಲ ಕಡು ಬಡತನದಿಂದ ಬಂದ ಗೌರಮ್ಮ ಮತ್ತು ಕೆಂಚಪ್ಪ ಮನೆ ಹಳೆಯದಾಗಿದ್ದು ಮನೆ ಕಟ್ಟಲು ಯಾವುದೇ ಅನುದಾನ ಇಲ್ಲದೆ ಹಳೆಯ ಮನೆಯಲ್ಲಿ ವಾಸಿಸುತ್ತಿದ್ದರು ನಿನ್ನೆ ಆದ ಬಿರುಗಾಳಿ ಗುಡುಗು ಸಹಿತ ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಿದ್ದಿದೆ ಇಂಥ ನೊಂದ ಕುಟುಂಬಕ್ಕೆ ಸರಕಾರ ಹಾಗೂ ಅಧಿಕಾರಿಗಳು ಪರಿಹಾರ  ಕೊಡಬೇಕೆಂದು ಗೌರಮ್ಮ ಕೆಂಚಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಆದಷ್ಟು ಬೇಗನೆ ಇವರಿಗೆ ಇರಲು ಮನೆ ಇಲ್ಲದ ಕಾರಣ ಇತ್ತ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಅವರ ಆಶ್ರಯಕ್ಕೆ ಧಾವಿಸಬೇಕೆಂದು  ಮನವಿ ಮಾಡಿ ಕೇಳಿಕೊಂಡಿದ್ದಾರೆ.