ಮಳೆ,ಗಾಳಿಗೆ ಬೆಳೆ ಹಾನಿ

ವಿಜಯಪುರ: ಮೇ.25: ಸುರಿದ ಭಾರಿ ಮಳೆ, ಗಾಳಿಗೆ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವ ಘಟನೆ ವಿಜಯಪುರ ತಾಲೂಕಿನ ಆಹೇರಿ ಗ್ರಾಮದಲ್ಲಿ ನಡೆದಿದೆ.
ಗಾಳಿ ಮಳೆ ರಭಸಕ್ಕೆ ಆಹೇರಿ ಗ್ರಾಮದ ಸುತ್ತಮುತ್ತಲಿನ ಕಡೆಯ ಬೆಳೆಗಳು ಧರೆಗುರುಳಿದಿವೆ.ಒಂದರಿಂದ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ ದಾಳಿಂಬೆ ಹಾಗೂ ನಿಂಬೆ ಬೆಳೆಗಳು ನಾಶವಾಗಿದೆ.
ಬಿರಾದಾರ, ಶಿವಾಜಿ ಎಂಬುವರ ಬೆಳೆಗಳು ಹಾನಿಯಾಗಿದೆ. ಗಾಳಿ ಮಳೆಯಿಂದ ಹಾಳಾಗಿರುವ ದಾಳಿಂಬೆ ಹಾಗೂ ನಿಂಬೆ ಬೆಳೆಗೆ ಪರಿಹಾರ ನೀಡುವಂತೆ ರೈತರು ಮನವಿ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರ ಆಗ್ರಹಿಸಿದ್ದಾರೆ.