ಮಳೆಗಾಳಿಗೆ ನೆಲಕ್ಕುರಿಳಿದ ಮರಗಳು,


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.12 :- ಕಳೆದ ಸಂಜೆ ತಾಲೂಕಿನ ವಿವಿಧೆಡೆ ಸುರಿದ ಮಳೆಗಾಳಿಗೆ ಅಲ್ಲಲ್ಲಿ ಮರಗಳು ನೆಲಕ್ಕುರಿಳಿದ್ದು ಅದರಂತೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಗುಣಸಾಗರ ರಸ್ತೆಯಲ್ಲಿರುವ ಮರಗಳು ವಿದ್ಯುತ್ ತಂತಿ ಹಾಗೂ ನೆಲಕ್ಕುರಿಳಿದ ಘಟನೆ ಜರುಗಿದೆ.
ನಿನ್ನೆ ಸಂಜೆ ಮಳೆಗಾಳಿ ರಭಸ ಜೋರಾಗಿತ್ತು ಈ ಗಾಳಿಯಿಂದ ಗ್ರಾಮದ ಗುಣಸಾಗರ ರಸ್ತೆಯಲ್ಲಿನ ಮರಗಳು ನೆಲಕ್ಕೆ ಬಿದ್ದಿದ್ದು ಬೀಳುವಾಗ ವಿದ್ಯುತ್ ತಂತಿಗಳು ಸಹ ಹರಿದು ಬಿದ್ದಿದ್ದು ಇದರಿಂದ ಯಾವುದೇ ಪ್ರಾಣಾಪಾಯವಾಗದೆ ಜನ ಜಾನುವಾರು ಪಾರಾಗಿದ್ದಾರೆ ಇದರಿಂದ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು ನಂತರ ಸ್ಥಳಕ್ಕೆ ಧಾವಿಸಿದ ಲೈನ್ ಮ್ಯಾನ್ ಗಳು ವಿದ್ಯುತ್ ತಂತಿಗಳನ್ನು ಸರಿಪಡಿಸಿ ಗ್ರಾಮಕ್ಕೆ ವಿದ್ಯುತ್ ಬೆಳಕು ಕಲ್ಪಿಸಿದರು ಎಂದು ಗ್ರಾಮದ ಚೌಡೇಶ ತಿಳಿಸಿದರು.