ಮಳೆಗಾಳಿಗೆ ಕಿತ್ತೋದ ಆಲೂರು ಚೆಕ್ ಪೋಸ್ಟ್.ಸ್ಥಳಕ್ಕೆ ಸಹಾಯಕ ಚುನಾವಣಾಧಿಕಾರಿ ಭೇಟಿ,


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.23 :-  ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ತಾಲೂಕಿನ ಗಡಿಭಾಗದ ಆಲೂರು ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿ ಚುನಾವಣಾ ಅಕ್ರಮ ತಡೆಯಲು ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ಮಳೆಗಾಳಿಗೆ ಬಿದುರಿನ ತಟ್ಟಿಗಳು, ಹಾಕಿದ್ದ ಸಿ ಸಿ ಕ್ಯಾಮರಾಗಳು ಧಿಕ್ಕಾಪಾಲಾಗಿರುವ ಘಟನಾ ಸ್ಥಳಕ್ಕೆ ಸೋಮವಾರ ಲೋಕಸಭಾ ಚುನಾವಣೆಯ ಕೂಡ್ಲಿಗಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ ಹೆಚ್ ಎನ್ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಕೆಲವಾಹನಗಳ ತಪಾಸಣೆಯನ್ನು ತಾವೇ ಖುದ್ದಾಗಿ ಪರಿಶೀಲಿಸಿದರು.
ಸೋಮವಾರ ಸಂಜೆ ಮಳೆಗಾಳಿ ಹಾಗೂ ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು ಅಲ್ಲದೆ ಆಲೂರು ಬಳಿ ಚುನಾವಣಾ ಆಕ್ರಮ ತಡೆಗಟ್ಟುವ ದೃಷ್ಟಿಯಿಂದ ನಿರ್ಮಿಸಿದ ಚೆಕ್ ಪೋಸ್ಟ್ ಮಳೆಗಾಳಿ ಹೊಡೆತಕ್ಕೆ ಬಿದಿರಿನ ತಟ್ಟಿ ಹಾಗೂ ಮೆಲೋದಿಕೆ ಹಾಕಲಾಗಿದ್ದ ಪ್ಲಾಸ್ಟಿಕ್ ಕವರ್ ಮತ್ತು ಕಣ್ಗವಾಲು ಇರುವ ಸಿ ಸಿ ಕ್ಯಾಮರಾಗಳು ಗಾಳಿಯ ರಭಸದಲ್ಲಿ ದಿಕ್ಕಾಪಾಲಗಿ ಬಿದ್ದಿರುವ ಬಗ್ಗೆ ವಿಷಯ ತಿಳಿದ ಸಹಾಯಕ ಚುನಾವಣಾಧಿಕಾರಿ ಆಲೂರು  ಚೆಕ್ ಪೋಸ್ಟ್ ಸಿಬ್ಬಂದಿಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿಯನ್ನು ಆರಿತು ತಕ್ಷಣ ಸಂಬಂದಿಸಿದ ಇಲಾಖೆಯ ಗಮನಕ್ಕೆ ತಂದು ಚೆಕ್ ಪೋಸ್ಟ್ ಬಿಗಿಯಾಗಿ ನಿರ್ಮಿಸುವಂತೆ ತಿಳಿಸಿದರು. ಮತ್ತು ಚೆಕ್ ಪೋಸ್ಟ್ ನಿಯೋಜಿತ ಸಿಬ್ಬಂದಿಗಳಿಗೆ 
ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ನಡೆಸಬೇಕು. ಯಾವುದೇ ಸಬೂಬು ಹೇಳದೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಾಗಬೇಕು. ಮಳೆ, ಗಾಳಿಗೆ ತೊಂದರೆಯಾಗದಂತೆ  ಬಿದುರಿನ ತಡಿಕೆಗಳನ್ನು ಭದ್ರವಾಗಿ ಕಟ್ಟಿಕೊಂಡು, ಮಳೆಗೆ ಸೋರದಂತೆ ಪ್ಲಾಸ್ಟಿಕ್ ತಾಡಪಾಲುಗಳನ್ನು ಕಟ್ಟಿಕೊಳ್ಳುವಂತೆ ಸಂಬoಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದರು.
ವಾಹನಗಳ ತಪಾಸಣೆ : ಇದೇ ಸಂದರ್ಭದಲ್ಲಿ ಚಿತ್ರದುರ್ಗ ಕಡೆಯಿಂದ ತಾಲೂಕಿನ ಕಡೆಗೆ ಬರುವ  ವಾಹನಗಳನ್ನು ಸಿಬ್ಬಂದಿ ಜೊತೆ ಸೇರಿ ಸಹಾಯಕ ಚುನಾವಣಾಧಿಕಾರಿ ಡಾ. ರಘು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಚುನಾವಣಾ ಕರ್ತವ್ಯನಿರತ ಅಧಿಕಾರಿಗಳಾದ ಡಾ.ಜಗದೀಶ್‌ಚಂದ್ರ ಬೋಸ್, ನಾಗರಾಜ ಕೊಟ್ರಪ್ಪಗಳ, ಬಿ.ಶರಣಬಸಪ್ಪ, ಎಸ್.ವಿ.ರಾಚಪ್ಪ, ಪೇದೆಗಳಾದ ಗುರುಬಸವರಾಜ, ಜ್ಯೋತಿ, ರೇವಣರಾಜ, ಗ್ರಾಮ ಆಡಳಿತ ಅಧಿಕಾರಿಗಳಾದ ಚನ್ನಬಸಯ್ಯ, ವೀರೇಶ್ ಸೇರಿ ಇತರರಿದ್ದರು.