ಮಳೆಗಾಲ ಹಿನ್ನೆಲೆ ನಗರದ ಸಾರ್ವಜನಿಕರು ಹೈಮಾಸ್ಟ್ ಹಾಗೂಬೀದಿ ದೀಪಗಳ ಕಬ್ಬಿಣದ ಕಂಬಗಳನ್ನು ಮುಟ್ಟದಂತೆ ಸೂಚನೆ

ಕಲಬುರಗಿ,ಜು.18:ಮಳೆಗಾಲ ಆರಂಭಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿನ ಹೈಮಾಸ್ಟ್ ಹಾಗೂ ಬೀದಿ ದೀಪದ ಕಬ್ಬಿಣದ ಟುಬಲರ್ ಕಂಬಗಳ ಸುತ್ತಮುತ್ತಲೂ ಕರೆಂಟ್ ಬಂದು ಶಾಕ್ ಹೊಡೆಯುವ ಸಾಧ್ಯತೆ ಇರುತ್ತದೆ. ನಗರದ ಸಾರ್ವಜನಿಕರು ಇದರ ಸುತ್ತಮುತ್ತಲೂ ಹೋಗದಂತೆ ಹಾಗೂ ಅವುಗಳನ್ನು ಮುಟ್ಟಬಾರದೆಂದು ಕಲಬುರಗಿ ಮಹಾನಗರಪಾಲಿಕೆ ಉಪ ಆಯುಕ್ತರು (ಅಭಿವೃದ್ಧಿ) ಅವರು ತಿಳಿಸಿದ್ದಾರೆ.
ಇದಲ್ಲದೇ ಇತರೆ ಬೀದಿ ದೀಪದ ಕಂಬಗಳಿಗೆ ಕಟೌಟ್‍ಗಳನ್ನು ಹಾಕದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ನಗರದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಪಾಲಿಕೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ದೀಪ ಸೇರಿದಂತೆ ನಗರದ ವಿವಿಧ ಗಾರ್ಡನ್, ಸರ್ಕಲ್‍ಗಳಲ್ಲಿ ಬೀದಿ ದೀಪಗಳ ಹೈಮಾಸ್ಟ್‍ಗಳನ್ನು ಹಾಗೂ ನಗರದ ವರ್ತುಲ, ಮುಖ್ಯ ರಸ್ತೆಗಳಲ್ಲಿ ಕಬ್ಬಿಣದ ಟುಬಲರ್ ಕಂಬಗಳಿಗೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.