ಸೇಡಂ,ಜು,15: ಮಳೆಗಾಲದಲ್ಲಿ ಸಂಕ್ರಾಮಿಕ ರೋಗಗಳು ಸಾರ್ವಜನಿಕರಿಗೆ ಹರಡುವ ಮುಂಚಿತವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಗ್ರಾಮ ಪಂಚಾಯತಿಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಿಗೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ (ಇಓ )ಶಂಕರ ರಾಠೋಡ ಖಡಕ್ ವಾನಿರ್ಂಗ್ ನೀಡಿದರು.
ಸೇಡಂ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿರುವ ಅಂಗನವಾಡಿ ಮೂರಕ್ಕೆ ಭೇಟಿ ನೀಡಿದಾಗ ಕಂಡು ಪಂಚಾಯತಿಯ ಅಧಿಕಾರಿಗಳಿಗೆ ಸಿಬ್ಬಂದಿ ವರ್ಗದವರಿಗೆ ತರಟೆಗೆ ತೆಗೆದುಕೊಂಡರು ಮುಂಬರುವ ದಿನಗಳಲ್ಲಿ ರಸ್ತೆ ಸೇರದಂತೆ ವಿವಿಧ ಸ್ಥಳಗಳಲ್ಲಿ ಸುತ್ತಮುತ್ತ ಸ್ವಚ್ಛವಾಗಿ ಇಟ್ಟುಕೊಳ್ಳಲು ಸೂಚಿಸಿದರು.
ಕೃಷಿ ಇಲಾಖೆಗೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ರೈತರಿಗೆ ಅನುಕೂಲ ವಾಗುವ ರೀತಿಯಲ್ಲಿ ಔಷದ ಸಂಗ್ರಹಣೆ ವಿತರಣೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ರುದ್ರೇಶೆಟ್ಟಿ
ಪಡಶೆಟ್ಟಿ, ಅಮೃತ ದಸ್ತಾಪೂರ, ರವಿ
ರಾಠೋಡ, ಗ್ರಾಪಂ ಸದಸ್ಯ ಅಹ್ಮದ ಮೋಮಿನ, ಶಾಂತವೀರ, ಪ್ರೇಮಲಾತ
ರವಿ ಅಲ್ಲಾಪೂರ, ಉಪಸ್ಥಿತರಿದ್ದರು.