ಮಳೆಗಾಲದೋಳಗೆ ವಿವಿಯ ಆವರಣದಲ್ಲಿ 3ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಡಲು ಸಿದ್ದತೆ: ಪ್ರೊ.ಆರ್.ಸುನಂದಮ್ಮ

ವಿಜಯಪುರ, ಜೂ.8-ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸೋಮವಾರ ವಿವಿಯ ಆವರಣದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಅವರು ಸಸಿ ನೆಟ್ಟು ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ 300ಕ್ಕೂ ಹೆಚ್ಚು ವಿವಿಧ ತಳಿಗಳ ಸಸಿ ನಡೆಲಾಯಿತು.
ಈ ಮಳೆಗಾಲ ಮುಗಿಯುವುದರೊಳಗಾಗಿ ಅರಣ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ವಿವಿಯ ಆವರಣದಲ್ಲಿ ಮೂರು ಸಾವಿರದಷ್ಟು ವಿವಿಧ ಜಾತಿಯ ಸಸಿಗಳನ್ನು ನೆಡುವುದಾಗಿ ಅವರು ತಿಳಿಸಿದರು.
ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ನಾಮದೇವಗೌಡ, ವಿಜ್ಞಾನ ನಿಕಾಯದ ಡೀನ್ ಪ್ರೊ.ಜಿ.ಜಿ.ರಜಪೂತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಕ್ರೀಡಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಮಾಲಿಪಾಟೀಲ, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಕಲಾವತಿ ಕಾಂಬಳೆ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮಿದೇವಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಶಾಂತಾದೇವಿ, ಯೋಗ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ ಉಪಾಧ್ಯೆ, ಅಧ್ಯಾಪಕರಾದ ಡಾ. ಎಂ.ಪಿ.ಬಳಿಗಾರ, ಡಾ.ರಮೇಶ ಸೋನಕಾಂಬಳೆ, ಡಾ.ದು.ಸರಸ್ವತಿ, ಡಾ.ಗುಲಾಬ್ ರಾಠೋಡ, ದೀಪಕ್ ಶಿಂದೆ. ಸಹಾಯಕ ಕುಲಸಚಿವೆ ಶ್ರೀಮತಿ ರಾಜೇಶ್ವರಿ ಬದನೂರು, ಹಾಗೂ ವಿವಿಯ ಇತರೆ ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.