ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಕುರಿತು ಜಾಗೃತಿ

ಮಾನವಿ,ಜು.೨೫-
ಪಟ್ಟಣ ಸಮೀಪದ ಹಿರೇಕೊಟ್ನಕಲ್ ಹಾಗೂ ಭೋಗವತಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.. ವಿಧ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಡೆಂಗ್ಯೂ ಜ್ವರ ಹಾಗೂ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲಾಯಿತು ಸೊಳ್ಳೆಗಳು ಕಚ್ಚದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪರಿಸರ ಸ್ವಚ್ಛತೆ ಕಾಪಾಕೊಳ್ಳಬೇಕು ಎಂದರು
ನಂತರ ಮಾತನಾಡಿದ ಭೋಗವತಿಶಾಲೆಯ ಮುಖ್ಯ ಗುರುಗಳು ಸಬ್ಬಜಲ್ಲಿ ಸಾಬ ಅವರು ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುಕ್ಕಿಂತ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಭೀಮೇಶಪ್ಪ ಸ್ವಚ್ಛತೆ ಎಲ್ಲಿದಿಯೋ ಅಲ್ಲಿ ಆರೋಗ್ಯ ಇರುತ್ತದೆ ಪ್ರತಿಯೊಬ್ಬರು ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರೇಕೋಟ್ನಕಲ್ ಶಾಲೆಯ ಗುರುಗಳಾದ ಸಂಜೀವಮ್ಮ ಶರಣಮ್ಮ ಪ್ರಕಾಶ ಶಿವಗ್ಯಾನಿ ಶ್ರೀದೇವಿ ಬಸವರಾಜ ಗಿರೀಶ್ ಹಾಗೂ ಭೋಗವತಿ ಶಾಲಾ ಶಿಕ್ಷಕರ ಉಪಸ್ಥಿತರಿದ್ದರು.