ಮಳೆಗಾಲದಲ್ಲಿ ಜಾಗರೂಕತೆ ಅತ್ಯಗತ್ಯ

ಈಗಂತೂ ಜನರಿಗೆ ಸಣ್ಣ ಪುಟ್ಟ ನೆಗಡಿ, ಶೀತ ಉಂಟಾದರೂ ಅದು ಕೋರೋನಾ ಇರಬಹುದು ಎಂಬ ಭಯ ಕಾಡುತ್ತಿದೆ. ಬೇಸಿಗೆ ಕಾಲ ಕಳೆದು ಮಳೆಗಾಲ ಶುರುವಾಯಿತು ಎಂದರೆ ಕಾಯಿಲೆಗಳು ಕೂಡ ಪ್ರಾರಂಭ ಎಂದೇ ಅರ್ಥ. ಒಂದಲ್ಲಾ ಒಂದು ರೂಪದಲ್ಲಿ ಕಲುಷಿತ ವಾತಾವರಣದಲ್ಲಿ ಉಂಟಾಗುವ ಸೋಂಕುಗಳು ನಮ್ಮನ್ನು ಮಳೆಗಾಲ ಮುಗಿಯುವವರೆಗೂ ಬಾಧೆ ಪಡುವಂತೆ ಮಾಡುತ್ತವೆ.

ಈಗಂತೂ ಜನರಿಗೆ ಸಣ್ಣ ಪುಟ್ಟ ನೆಗಡಿ, ಶೀತ ಉಂಟಾದರೂ ಅದು ಕೋರೋನಾ ಇರಬಹುದು ಎಂಬ ಭಯ ಕಾಡುತ್ತಿದೆ.

ಆಸ್ಪತ್ರೆಗಳಿಗೂ ವೈದ್ಯರನ್ನು ನಂಬಿ ಹೋಗಲಾರದಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಹಾಗಾಗಿ ಮನೆಯಲ್ಲಿ ನಾವೇ ಏನಾದರೂ ಸ್ವತಃ ತಯಾರು ಮಾಡಿಕೊಂಡು ನಮ್ಮ ಆರೋಗ್ಯದ ರಕ್ಷಣೆ ಮಾಡಿಕೊಳ್ಳುವುದು ಒಳಿತು ಎಂದು ಪ್ರತಿಯೊಬ್ಬರ ಆಲೋಚನೆ ಇರುತ್ತದೆ.

ಕಲುಷಿತ ನೀರಿನಿಂದ ಉಂಟಾಗುವ ಇಂತಹ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಲು ಮೊಟ್ಟ ಮೊದಲಿಗೆ ನಮ್ಮ ದೇಹದ ರೋಗ – ನಿರೋಧಕ ವ್ಯವಸ್ಥೆ ಸದೃಢವಾಗಿರುವಂತೆ ನಾವು ನೋಡಿಕೊಳ್ಳಬೇಕು.

ಮಳೆಗಾಲಕ್ಕೆ ಹೇಳಿ ಮಾಡಿಸಿದ ನೈಸರ್ಗಿಕ ಮನೆ ಮದ್ದು ಔಷದಿ ಸೋಂಕುಗಳ ಪ್ರತಾಪದಿಂದ ಕಾಪಾಡಬಲ್ಲವು

ತುಳಸಿ ಎಲೆಗಳು

ಹಚ್ಚ ಹಸಿರಾದ ತಾಜಾ ತುಳಸಿ ಎಲೆಗಳಲ್ಲಿ ಸಮೃದ್ಧವಾದ ಆಂಟಿ – ಆಕ್ಸಿಡೆಂಟ್ ಅಂಶಗಳು ಲಭ್ಯವಿರುವ ಕಾರಣ ನಮ್ಮ ಜೀವ ಕೋಶಗಳನ್ನು ಫ್ರೀ – ರಾಡಿಕಲ್ ಗಳ ಹಾನಿಯಿಂದ ತಪ್ಪಿಸುತ್ತವೆ. ಇದರ ಜೊತೆಗೆ ತುಳಸಿ ಎಲೆಗಳಲ್ಲಿ ಔಷಧೀಯ ಗುಣ ಕಂಡು ಬರುತ್ತದೆ ಎಂಬ ಸತ್ಯ ಎಲ್ಲರಿಗೂ ಗೊತ್ತು.

ವೈಜ್ಞಾನಿಕವಾಗಿ ನೋಡುವುದಾದರೆ ತುಳಸಿ ಎಲೆಗಳಲ್ಲಿ ಆಂಟಿ – ಇಂಪ್ಲಾಮೇಟರಿ ಮತ್ತು ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಇರುವ ಕಾರಣ ಮಳೆಗಾಲ ಹಾಗೂ ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಶೀತ ಸಂಬಂಧಿ ಸಮಸ್ಯೆಗಳಾದ ಶೀತ, ಕೆಮ್ಮು, ನೆಗಡಿ, ಜ್ವರ, ವಾಂತಿ, ಭೇದಿ ಇತ್ಯಾದಿಗಳನ್ನು ಹೋಗಲಾಡಿಸುತ್ತದೆ.

ಉರಿಯೂತದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುಳಸಿ ಎಲೆಗಳು ತುಂಬಾ ಸಹಾಯಕ. ತಮ್ಮ ದೇಹಕ್ಕೆ ಸಂಬಂಧ ಪಟ್ಟಂತೆ ದುರ್ಬಲ ರೋಗ – ನಿರೋಧಕ ವ್ಯವಸ್ಥೆಯನ್ನು ಹೊಂದಿ ಈಗಾಗಲೇ ಶೀತ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಅಥವಾ ಸಂಜೆಯ ಸಮಯದಲ್ಲಿ ಶುಂಠಿ ಮತ್ತು ಜೇನು ತುಪ್ಪ ಮಿಶ್ರಿತ ತುಳಸಿ ಎಲೆಗಳ ಚಹಾ ಕುಡಿಯುವುದರಿಂದ ಬಹಳ ಬೇಗನೆ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.

ಬೆಳ್ಳುಳ್ಳಿ

ಅಡುಗೆ ತಯಾರಿಯಲ್ಲಿ ಬೆಳ್ಳುಳ್ಳಿಯ ಬಳಕೆ ಇದ್ದೇ ಇರುತ್ತದೆ. ಅದರಲ್ಲೂ ನಮ್ಮ ಭಾರತೀಯ ಅಡುಗೆ ಸಂಸ್ಕೃತಿಯಲ್ಲಿ ಬೆಳ್ಳುಳ್ಳಿಗೆ ವಿಶೇಷ ಸ್ಥಾನ ಇದೆ. ಇದರಲ್ಲಿ ಆಂಟಿ – ಆಕ್ಸಿಡೆಂಟ್ ಅಂಶಗಳು ಆಂಟಿ – ಇನ್ಫಾಮೇಟರಿ ಅಂಶಗಳು ಮತ್ತು ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಸಾಕಷ್ಟು ಕಂಡು ಬರುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದೊಂದು ಉತ್ತಮ ಮನೆಮದ್ದು ಆಗಬಲ್ಲದು

ನಮ್ಮ ರೋಗ – ನಿರೋಧಕ ವ್ಯವಸ್ಥೆಯನ್ನು ಬಲ ಪಡಿಸಿ ನಮ್ಮ ರಕ್ತ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಬೇಡದ ವಿಷಕಾರಿ ತ್ಯಾಜ್ಯಗಳನ್ನು ನಮ್ಮ ದೇಹದಿಂದ ಹೊರ ಹಾಕುವಲ್ಲಿ ಬೆಳ್ಳುಳ್ಳಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಪ್ರತಿ ದಿನ ಬೆಳ್ಳುಳ್ಳಿ ಸೇವನೆ ಒಳ್ಳೆಯದು.

ಪುದೀನಾ ಎಲೆಗಳು

ಮಳೆಗಾಲಕ್ಕೆ ಹೇಳಿ ಮಾಡಿಸಿದ ನೈಸರ್ಗಿಕ ಮನೆ ಮದ್ದು ಔಷಧಿ ಎಂದರೆ ಅದು ಪುದಿನಾ ಎಲೆಗಳು. ಪುದಿನ ಎಲೆಗಳಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತವೆ. ಸಣ್ಣ ಪುಟ್ಟ ಜ್ವರದ ಸಮಸ್ಯೆಗಳನ್ನು ನಿವಾರಣೆ ಮಾಡಿ ದೇಹದಲ್ಲಿರುವ ಸೂಕ್ಷ್ಮಾಣುಗಳ ಸಂತತಿಯನ್ನು ಕಡಿಮೆ ಮಾಡಿ ಯಾವುದೇ ಹೊಸ ಬಗೆಯ ಸೋಂಕುಗಳು ಉಂಟಾಗದಂತೆ ನಿಮ್ಮ ದೇಹದಲ್ಲಿ ರೋಗ – ನಿರೋಧಕ ಶಕ್ತಿಯನ್ನು ಬಲ ಪಡಿಸುತ್ತದೆ.

ಜ್ವರ ಬಂದಂತಹ ಸಂದರ್ಭದಲ್ಲಿ ನಿಮಗೆ ಹೆಚ್ಚು ಬೆವರು ಉಂಟಾಗುವಂತೆ ಮಾಡಿ ನಿಮ್ಮ ದೇಹದ ತಾಪಮಾನವನ್ನು ತಗ್ಗಿಸುವಲ್ಲಿ ಪುದಿನಾ ಎಲೆಗಳು ಸದಾ ಮುಂದಿರುತ್ತವೆ.

ಇಷ್ಟೇ ಅಲ್ಲದೆ ಜ್ವರದ ಸಂದರ್ಭದಲ್ಲಿ ನಿಮಗೆ ಎದುರಾಗುವ ಅನಾರೋಗ್ಯದ ಕಾರಣದಿಂದ ಉಂಟಾಗುವ ಅಜೀರ್ಣತೆ ಸಮಸ್ಯೆಯನ್ನು ದೂರ ಮಾಡಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

ಪುದೀನಾ ಎಲೆಗಳ ಚಹಾ ಕುಡಿಯುವುದರಿಂದ ಅಥವಾ ಹಸಿ ಪುದಿನ ಎಲೆಗಳನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನುವುದರಿಂದ ನಿಮ್ಮ ಗಂಟಲಿನ ಕಿರಿಕಿರಿ ಸಹ ದೂರವಾಗುತ್ತದೆ.

ತ್ವಚೆಯ ಏನೇ ಸಮಸ್ಯೆ ಇರಲಿ ಪುದೀನಾ ಫೇಸ್ ಪ್ಯಾಕ್ ಬಳಸಿ ಸಾಕು

ಅರಿಶಿನ

ನೀವು ತಯಾರು ಮಾಡುವ ಅಡುಗೆ ಪದಾರ್ಥಗಳು ಬಣ್ಣವನ್ನು ಕಣ್ಣು ಕುಕ್ಕುವಂತೆ ಬದಲಾಯಿಸುವ ಅತ್ಯದ್ಭುತ ಗುಣ ಲಕ್ಷಣ ಅರಿಶಿನದಲ್ಲಿ ಕಂಡು ಬರುತ್ತದೆ.

ಅಡುಗೆಗಾಗಿ ನಾವು ಬಳಸುವ ಅರಿಶಿನದಲ್ಲಿ ’ ಕುರ್ಕ್ಯುಮಿನ್ ’ ಎಂಬ ಶಕ್ತಿಯುತವಾದ ಆಂಟಿ – ಆಕ್ಸಿಡೆಂಟ್ ಅಂಶವಿದ್ದು ಸಾಕಷ್ಟು ಆಂಟಿ – ಇಂಪ್ಲಾಮೆಟೋರಿ ಗುಣ ಲಕ್ಷಣಗಳನ್ನು ಇದು ಒಳಗೊಂಡಿದೆ.

ಅದರಲ್ಲೂ ನಿಮ್ಮ ದೇಹದಲ್ಲಿ ಫ್ರೀ – ರಾಡಿಕಲ್ ಗಳ ಹಾವಳಿಯಿಂದ ಉಂಟಾಗುವ ಹಾನಿಯನ್ನು ತಪ್ಪಿಸಿ ರೋಗ ಕಾರಕ ಸೂಕ್ಷ್ಮ ಬ್ಯಾಕ್ಟೀರಿಯಾಗಳು ನಿಮ್ಮ ದೇಹದಲ್ಲಿ ಯಾವುದೇ ಕಾರಣಕ್ಕೂ ಬೆಳವಣಿಗೆ ಆಗದಂತೆ ನೋಡಿಕೊಂಡು ಮಳೆಗಾಲದ ಸಮಯದಲ್ಲಿ ನಿಮ್ಮ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ನಿಮ್ಮನ್ನು ಆರೋಗ್ಯವಂತರನ್ನಾಗಿ ಕಾಪಾಡುತ್ತದೆ.

ದಿನಾ ಒಂದು ಗ್ಲಾಸ್ ಅರಿಶಿನ ಹಾಲು ಕುಡಿದರೆ ಈ ಕಾಯಿಲೆಗಳೆಲ್ಲಾ ದೂರ

ಮೆಂತ್ಯ ಕಾಳುಗಳು

ಮೆಂತ್ಯ ಕಾಳುಗಳು ದೇಹಕ್ಕೆ ತುಂಬಾ ತಂಪು. ಶೀತಕ್ಕೆ ಸಂಬಂಧ ಪಟ್ಟ ಜ್ವರ ಉಂಟಾದ ಸಂದರ್ಭದಲ್ಲಿ ವಿಪರೀತ ಏರಿಕೆಯಾದ ತಾಪಮಾನವನ್ನು ಬಹಳ ಪರಿಣಾಮಕಾರಿಯಾಗಿ ತಗ್ಗಿಸುತ್ತವೆ. ಮೆಂತ್ಯ ಕಾಳುಗಳಲ್ಲಿ ತುಂಬಾ ಶಕ್ತಿಯುತವಾದ ಆಂಟಿ – ಆಕ್ಸಿಡೆಂಟ್ ಗಳು ಲಭ್ಯವಿದ್ದು, ಇವುಗಳು ಆಂಟಿ – ಇನ್ಫಾಮೇಟರಿ ಮತ್ತು ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಒಳಗೊಂಡಿದೆ.

ಇಡೀ ರಾತ್ರಿ ನೆನೆ ಹಾಕಿದ ಮೆಂತ್ಯ ಕಾಳುಗಳ ನೀರನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ನಿತ್ಯ ನಿಯಮಿತವಾಗಿ ಮೆಂತ್ಯೆ ಕಾಳುಗಳ ಸೇವನೆ, ಮೆಂತ್ಯ ಸೊಪ್ಪಿನ ತಯಾರು ಮಾಡಿದ ಖಾದ್ಯಗಳ ಸೇವನೆ, ಅಥವಾ ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆ ಹಾಕಿ ಆ ನೀರನ್ನು ಕುಡಿಯುವುದರಿಂದ ಅಜೀರ್ಣತೆ, ಮಲಬದ್ಧತೆ ಮತ್ತು ಇನ್ನಿತರ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗುತ್ತವೆ.