ಮಳೆಗಾಗಿ ಪ್ರಾರ್ಥಿಸಿ101 ಲಿಂಗಗಳಿಗೆ ವಿಶೇಷ ಪೂಜಾಭಿಷೇಕ

ಕೆಂಭಾವಿ: ಜು.10: ಮಳೆಗಾಗಿ ಮತ್ತು ನಾಡಿನ ಒಳಿತಿಗಾಗಿ ಪ್ರಾರ್ಥಿಸಿ ಪ್ರತಿ ವರ್ಷ ನಡೆಯುವ ವಿಶೇಷ ಪೂಜೆ ಈ ಬಾರಿಯು ಕೂಡಾ ಸಡಗರ ಸಂಭ್ರಮದಿಂದ ಪಟ್ಟಣದ ಸೀಮೆಯ ಗಡಿಭಾಗದಲ್ಲಿರುವ ರಾಮಲಿಂಗೆಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಪಟ್ಟಣದಲ್ಲಿರುವ ಒಂದು ನೂರಾ ಒಂದು (101) ಲಿಂಗಗಳಿಗೆ ಹಲಗೆ, ಭಾಜ ಭಜಂತ್ರಿ, ಡೊಳ್ಳು ಭಜನೆಯೊಂದಿಗೆ ಮೆರವಣಿಗೆ ಮೂಲಕ ಅಭಿಷೇಕ ಮಾಡಲಾಯಿತು. ಪೂಜೆ ವೇಳೆ ಪಟ್ಟಣದ ರೈತರು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಲೋಕ ಕಲ್ಯಾಣಕ್ಕಾಗಿ ಉತ್ತಮ ಮಳೆ, ಬೆಳೆಯಾಗಿ ರೈತಾಪಿ ವರ್ಗದ ಸಂಕಷ್ಟ ಪರಿಹಾರವಾಗಲೆಂದು ಈ ದಿನ ಊರಿನಲ್ಲಿ ಯಾವುದೇ ಕೃಷಿ ಚಟುವಟಿಕೆ ಮತ್ತು ಸಹ ಮನೆಯಲ್ಲಿ ರೊಟ್ಟಿ ಮಾಡದೇ ಭಕ್ತಿ ಪರಾಕಷ್ಠೆ ಮೆರೆಯುವುದು ಇಂದಿನ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಅಲ್ಲದೇ ಪಟ್ಟಣದ ಎರಡು ದೇವರುಗಳಾದ ಹಜರತ್ ಜಚ್ಚಾ ಮಾಸಾಬಿ ಮತ್ತು ಈ ರಾಮಲಿಂಗಪ್ಪ ದೇವರನ್ನು ಕರೆದುಕೊಂಡು ಬಂದರೇ ಉತ್ತಮ ಮಳೆ, ಸಮೃದ್ಧಿ ಬೆಳೆ ಹಾಗೂ ಪಟ್ಟಣದ ಜನತೆ ಆರೋಗ್ಯದಿಂದ ಇರುತ್ತಾರೆ ಎಂಬ ಪ್ರತೀಕತೆ ಇಲ್ಲಿಯ ಜನತೆಯದ್ದಾಗಿದೆ.
ಈ ಸಂಧರ್ಭದಲ್ಲಿ ಪಟ್ಟಣದ ಪ್ರಮುಖರಾದ ಮಡಿವಾಳಪ್ಪಗೌಡ ಪೆÇೀಲಿಸ ಪಾಟೀಲ.ಮುರುಗೇಶ ಸಾಹು ಹುಣಸಗಿ.ಮಹಿಪಾಲರೆಡ್ಡಿ ದಿಗ್ಗಾವಿ.ಬಾಪುಗೌಡ ಪೆÇೀ.ಪಾಟೀಲ.ಮಲ್ಕನಗೌಡ ಪೆÇೀ.ಪಾಟೀಲ .ರಾಮನಗೌಡ ಪೆÇೀ.ಪಾಟೀಲ.ರಮೇಶ ಸಾಹು ತುಂಬಗಿ.ಚಿಂತಾರೆಡ್ಡಿ ಡಿಗ್ಗಾವಿ.ಶಿವರೆಡ್ಡಿ ಧರಿ
ಧರ್ಮಣ್ಣ ಕೋತಿನ .ನಿಜಲಿಂಗಪ್ಪ ಧರಿ.ರಾಮಲಿಂಗಪ್ಪ ಧರಿ .ಗಿರೇಪ್ಪ ಮ್ಯಾಗೇರಿ.ಭೀಮು ಶಹಾಪೂರ.ರಂಗಪ್ಪ ಭೋವಿ ಸೇರಿದಂತೆ ಅನೇಕರಿದ್ದರು.