ಸೊರಬ.ಜೂ.13: ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಪುರ ದೈವ ಶ್ರೀ ಕಲ್ಲೇಶ್ವರ ಸ್ವಾಮಿಗೆ ಅಕ್ಕನ ಬಳಗದ ವತಿಯಿಂದ ಹಮ್ಮಿಕೊಂಡಿರುವ ವಿಶೇಷ ಪೂಜೆ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ನೆರವೇರಿತು.ನಂತರ ಆಶೀರ್ವಚನ ನೀಡಿದ ಅವರು ವಾರ್ಷಿಕ ವಾಡಿಕೆಯಂತೆ ಮಳೆ ಆರಂಭವಾಗಬೇಕಿತ್ತು . ಪ್ರಾಕೃತಿಕ ಆಸಮತೋಲನದಿಂದಾಗಿ ತೀವ್ರ ಸ್ವರೂಪದ ಬರಗಾಲ.ಮಳೆಯ ಪ್ರಮಾಣದಲ್ಲಿ ಕೊರತೆಯಿಂದಾಗಿ ರೈತರಿಗೆ .ಪ್ರಾಣಿ ಪಕ್ಷಿ ಜೀವ ಸಂಕುಲಕ್ಕೆ ತೊಂದರೆ ಉಂಟಾಗಿದೆ ಮಳೆ ಹಿನ್ನಡೆ ಉಂಟಾಗಿದೆ ಉತ್ತಮ ಮಳೆಗಾಗಿ.ಬೆಳೆಗಾಗಿ ಹಿಂದಿನಿಂದ ಲೂ ಪೂಜೆ.ಅಭಿಷೇಕ.ಜಪ.ತಪ.ಹೋಮ..ಹವನ ಅನುಷ್ಠಾನ ಕೈಂಕರ್ಯಗಳು ನಡೆಯುತ್ತ ಬಂದಿದೆ ಎಂದ ಅವರು ಅಕ್ಕನ ಬಳಗದ ವತಿಯಿಂದ ಹಮ್ಮಿಕೊಂಡಿರುವ ಈ ಪೂಜೆ ಸಾರ್ಥಕತೆ ಹೊಂದಲಿ ಎಂದರು.ಹಿರೇಶಕುನ ಮಾರಿಕಾಂಬಾ ಸಮಿತಿ ಅಧ್ಯಕ್ಷ ಗುರು ಮೂರ್ತಿ, ನಾಗರಾಜ್ ಗುತ್ತಿ, ಸಿದ್ಧಲಿಂಗ ಸ್ವಾಮಿ, ಲಿಂಗರಾಜ ದೂಪದಮಠ,ಮಂಜು ಸ್ವಾಮಿ, ರೇಣುಕಮ್ಮಗೌಳಿ,ಜಯಮಾಲಾ,ಅನ್ವಿಕಾ, ಅಂಬಿಕಾ, ಸುಮಿತ್ರಾ,ಉಮಾ,ಮಾನಸ, ರೂಪಾ, ಲತಾ, ಸರೋಜಮ್ಮ ಸೇರಿದಂತೆ ಮೊದಲಾದವರಿದ್ದರು.