ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ


ಸಿರುಗುಪ್ಪ: ತಾಲ್ಲೂಕಿನ ಬಲಕುಂದಿ ಗ್ರಾಮದಲ್ಲಿ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಿಸಿದರು.
ವಿವಿಧ ಸೂಪ್ಪುಗಳಿಂದ ಅಲಂಕರಿಸಿದ ಬುಟ್ಟಿಯಲ್ಲಿ. ಕಪ್ಪೆಗಳನ್ನು ಇಟ್ಟುಕೂಂಡು ಮಕ್ಕಳ ಗೋಳಾಟ ನೋಡಲಾರೆನು ಶಿವನೆ ಬೇಗನೇ ಮಳೆಯ ಸುರಿಸು ಎಂದು ಹಾಡುತ್ತ ಈರಮ್ಮ, ನಾರಾಯಣಮ್ಮ, ಶೇಕಮ್ಮ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಮನೆಮನೆಗೆ ತೆರಳಿ ದವಸ ಧಾನ್ಯ ಸಂಗ್ರಹಿಸಿ ಕಪ್ಪೆಗಳ ಮೆರವಣಿಗೆ ಮಾಡಿ ಅಗಸ ಬಾಗಿಲಿಗೆ ಬಂದು ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಸಿದರು. ನಂತರ ಗ್ರಾಮದ ಹೊರಭಾಗದಲ್ಲಿ ಎಡೆಯನ್ನು ಪ್ರಸಾದದ ರೂಪದಲ್ಲಿ ಹಂಚಲಾಯಿತು.
ಕಪ್ಪೆಗಳ ಮದುವೆ ಮಾಡಿಸಿದಲ್ಲಿ ಮಳೆ ಬರುತ್ತದೆ ಎನ್ನುವುದು ಈ ಭಾಗದ ಜನರ ನಂಬಿಕೆಯಾಗಿದೆ.