ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.29: ಮುಂಗಾರು ಮಳೆ ಕೈಕೂಟ್ಟ ಕಾರಣದಿಂದ ಆತಂಕಗೊಂಡ ರೈತರು,ಅದ್ದರಿಂದ ರೈತರ ಮಕ್ಕಳು ಕಪ್ಪೆಗಳನ್ನು ಸಿಂಗರಿಸಿ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆಯನ್ನು ನಡೆಸಿದರು.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ 18ನೇ ವಾರ್ಡಿನ ಹಿರೇಬಾವಿ ತೆಗ್ಗಿನ ಬಳಿಯ ಹುಲಿಗಮ್ಮ ದೇವಸ್ಥಾನದಲ್ಲಿ ಮಳೆಗಾಗಿ ಕಪ್ಪೆಗಳ ಮದುವೆ ಮಾಡಿ ವಿಶೇಷ ರೀತಿಯಲ್ಲಿ ಪಟ್ಟಣದ ಸಾರ್ವಜನಿಕರು ಪ್ರಾರ್ಥನೆ ಸಲ್ಲಿಸಿದರು.
ಕಪ್ಪೆಗಳ ಮದುವೆ ಆದ ನಂತರ ಮಕ್ಕಳು ತೆಕ್ಕಲಕೋಟೆ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ದವಸ ಧಾನ್ಯ ಸಂಗ್ರಹಿಸಿ ಒಂದು ದಿನ ಊರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಗ್ರಾಮಸ್ಥ ಎಚ್.ಕಾಡಸಿದ್ದ ತಿಳಿಸಿದರು.
ಗಂಗಮ್ಮ, ದ್ಯಾವಮ್ಮ, ಸ್ನೇಹ, ಯಶೋಧ, ಕಾಳಿಂಗ, ರಾಜ, ಕೀರ್ತಿ, ದೇವಿ, ಅಂಬಿಕಾ, ಚೈತ್ರ ಮುಂತಾದ ಮಕ್ಕಳು ಇದ್ದರು.