ಮಳೆಗಾಗಿ ಪಾರಾಯಣ

ಕಲಬುರಗಿ,ಜೂ 18: ವಿಶ್ವ ಮಧ್ವ ಮಹಾ ಪರಿಷತ್ ಅಡಿಯಲ್ಲಿ ಹಂಸನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘದ ವತಿಯಿಂದ ನಗರದಲ್ಲಿಂದು ಮಳೆಗಾಗಿ ಪಾರಾಯಣ ಜರುಗಿತು.
ಸಕಾಲದಲ್ಲಿ ಮಳೆಯಾಗದೆ ಹಳ್ಳಿಗಳಲ್ಲಿ ರೈತರಿಗೆ ತೊಂದರೆಯಾಗುತ್ತಿದೆ.ನಗರದಲ್ಲಿ ಕೊಳವೆ ಭಾವಿ ಬತ್ತಿ ನೀರಿಲ್ಲದೆ ಜನರು ಪರದಾಡುವ ಪರಿಸ್ಥಿತಿ ಬಂದಿದೆ .ಅದಕ್ಕಾಗಿ ಕಲಬುರ್ಗಿ ಎಲ್ಲಾ ಪಾರಾಯಣ ಸಂಘಗಳ ಸದಸ್ಯರು 108 ಬಾರಿ ವರುಣ ಮಂತ್ರ ಪಠಣ ಮಾಡಿದರು.
ಪಾರಾಯಣಗಳ ಸಂಚಾಲಕ ರವಿ ಲಾತೂರಕರ , ಕೃಷ್ಣ ಕಾಕಲವಾರ, ನಾರಾಯಣ ಆಚಾರ್ಯ, ಗುಂಡೇರಾವ, ಸುರೇಶ ಹನುಮ ಸಾಗರ,ಗಿರೀಶ್ ಹನುಮಸಾಗರ ,ಪದ್ಮನಾಭ ಆಚಾರ್ಯ ಜೋಶಿ,ರಾಮಾಚಾರ್ಯ ನಗನೂರ,ಎನ್.ವಿ ಕುಲಕರ್ಣಿ,ಪ್ರಾಣೇಶ ಮುಜುಮಂದಾರ, ರಂಗರಾವ್ ಕುಲಕರ್ಣಿ, ವಿನೂತ ಜೋಶಿ, ಲಕ್ಷ್ಮೀ ಕಾಂತ ರಾವ್,ಮಹೇಶ್ ದೇಶಪಾಂಡೆ, ಧನೇಶ್,ಜಯತೀರ್ಥ ಶರ್ಮ,ಖ ಏ ಕುಲಕರ್ಣಿ,ಸಂತೋಷ್ ಕುಲಕರ್ಣಿ ಆಶಿಶ್, ಸಂಕರ್ಷಣ ಉಪಸ್ಥಿತರಿದ್ದರು.