ಮಳೆಗಾಗಿ ನಕ್ಕುಂದಿ ಗ್ರಾಮಸ್ಥರು ಕಪ್ಪೆ ಮದುವೆ

ಮಾನ್ವಿ,ಜೂ.೨೮-
ತಾಲೂಕಿನ ಬಹುತೇಕ ಹಳ್ಳಿಗಳ ದೇವಸ್ಥಾನಗಳಲ್ಲಿ ಪುರಾಣ ಪುಣ್ಯ ಕತೆಗಳ ಪರಾಯಣಕ್ಕೆ ಸಿದ್ದತೆ ನಡೆದಿದ್ದರೆ, ಅದೇ ರೀತಿ ತಾಲೂಕಿನ ನಕ್ಕುಂದಿ ಗ್ರಾಮಸ್ಥರು ಕಪ್ಪೆಗಳ ಮದುವೆ ಮತ್ತು ಮೆರವಣಿಗೆಯನ್ನು ಸಂಭ್ರಮದಿಂದ ಮದುವೆ ಊಟ ಹಾಕಿಸಿ ಆಚರಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶರಣಪ್ಪ ಅಗಸೆ ಮುಂದಿನ, ಮುದುಕಪ್ಪ ಗಲಗ, ವೀರಭದ್ರಪ್ಪ ವಿಶ್ವಕರ್ಮ,ಬೀರಪ್ಪ ಅಂಗಡಿ,ನಾಗರಾಜ್, ಮಲ್ಲಯ್ಯ,ಲಿಂಗಮ್ಮ, ಮುದಿಯಮ್ಮ, ಶಾಂತಮ್ಮ, ಶಾಣಮ್ಮ, ಈರಮ್ಮ,ಬಸಮ್ಮ ಕಬೀರ್, ಮಾಂತೇಶ್ ವಟಗಲ್,ಮೌನೇಶ ಮಾರ್ರೆ, ಪೂಜಾರಿ ಮಾಂತಮ್ಮ,ಬಸಮ್ಮ ಬಡಿಗೇರ್, ರತ್ನಮ್ಮ ಕರಡಿ ಸೇರಿದಂತೆ ಊರಿನ ಗ್ರಾಮಸ್ಥರು ಇದ್ದರು.