ಮಳೆಗಾಗಿ ದೇವಸ್ಥಾನದಲ್ಲಿ ಉಡಿ ತುಂಬಿದ ಶಾಸಕ ಕೋನರಡ್ಡಿ

ನವಲಗುಂದ,ನ.1; ಗ್ರಾಮದೇವತೆಗೆ ಉಡಿ ತುಂಬಿ ಬೇಗನೆ ಮಳೆಯಾಗಲೆಂದು ನವಲಗುಂದ ವಿದಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಪ್ರಾರ್ಥಿಸಿದರು.
ಅವರು ಮಂಗಳವಾರ ಪಟ್ಟಣದ ಗ್ರಾಮ ದೇವತೆ, ದುರ್ಗಮ್ಮನ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ ಹಾಗೂ ಹನುಮಂತ ದೇವರ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ನವಲಗುಂದ ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿಗೆ ಬೇಗ ಮಳೆಯಾಗಿ ಬೆಳೆಗಳನ್ನು ಉಳಿಸು ತಾಯಿ ಎಂದು ಮಹಿಳೆಯರು ಹಾಗೂ ಹಿರಿಯರೊಂದಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನಗರದ ಹಿರೀಯರಾದ ಬಸವರಾಜ ಹರಿವಾಳದ, ಆನಂದ ಹವಳಕೋಡ, ಪ್ರಕಾಶ ಶಿಗ್ಲಿ, ಡಿ.ಕೆ. ಹಳ್ಳದ, ಕೊಟ್ರೇಶ ಹಿರೇಮಠ, ಸುರೇಶ ಮೇಟಿ, ಯಲ್ಲಪ್ಪ ಉಕ್ಕಲಿ, ವೀರಣ್ಣ ಪೂಜಾರ, ಶರ್ಮಾಜಿ ಹಿರೇಮಠ, ಶಂಕರಗೌಡ ತಿಪ್ಪಿಮನಿ, ಮಲ್ಲಪ್ಪ ಹಂಡಿ, ಶೇಖಪ್ಪ ಕರಲಿಂಗಣ್ಣವರ ಇತರರು ಉಪಸ್ಥಿತರಿದ್ದರು.