ಮಳೆಗಾಗಿ ಗ್ರಾಮಸ್ಥರಿಂದ ಸಪ್ತ ಭಜನೆ ಕಾರ್ಯಕ್ರಮ

ಮಾನ್ವಿ,ಜು.೦೪-
ತಾಲೂಕಿನ ಆಲ್ದಾಳ ಗ್ರಾಮದ ಅರಾಧ್ಯ ದೈವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರರೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಗ್ರಾಮಸ್ಥರಿಂದ ೨೪ ಗಂಟೆಗಳ ಕಾಲ ನಿರಂತರ ಸಪ್ತ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಂಗಾರು ಹಂಗಾಮಿನಲ್ಲಿ ಈ ಬಾರಿ ಉತ್ತಮ ಮಳೆ ಬರುತ್ತದೆ ಎಂದು ರೈತರು ನಿರೀಕ್ಷೆ ಮಾಡಿ,ರೈತರು ಬೀಜ ಬಿತ್ತನೆ ಮಾಡಿದ್ದಾರೆ. ಆದರೆ ಸಕಾಲಕ್ಕೆ ಮಳೆ ಬಾರದೇ ರೈತರು ಸಂಕಷ್ಟಕ್ಕೆ ಈಡು ಮಾಡಿದ್ದು ಮಳೆಗಾಗಿ ರೈತರು ಮುಗಿಲತ್ತ ಮುಖ ಮಾಡಿದ್ದಾರೆ. ಮಳೆ ಕೊರತೆಯಿಂದ ವಿವಿಧಡೆ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ.
ಮಳೆಗಾಗಿ ಸೋಮುವಾರ ಬೆಳ್ಳಿಗೆ ಗ್ರಾಮದ ದೇವಸ್ಥಾನಗಳಿಗೆ ತೆರಳಿ ೧೧ ಬಿಂದಿಗೆಯಾಂದಿಗೆ ದೇವರಿಗೆ ನೀರು ಅರ್ಪಿಸಿ ನಂತರ ಸಾಮೂಹಿಕವಾಗಿ ಗ್ರಾಮಸ್ಥರಿಂದ ಸೋಮುವಾರ ಬೆಳ್ಳಿಗೆ ೯ ಗಂಟೆಯಿಂದ ಮಂಗಳವಾರ ಬೆಳ್ಳಿಗೆ ೯ ಗಂಟೆವರೆಗೆ ೨೪ ಗಂಟೆಗಳ ನಿರಂತರ ಸಾಮೂಹಿಕ ಸಪ್ತ ಭಜನೆ ನೇರವೇರಿಸಿ ನಂತರ ಗ್ರಾಮದ ಶ್ರೀ ಮಾರಿಕಾಂಬ ಗುಡಿ, ಶ್ರೀ ಅಂಜಿನಯ್ಯ ದೇವಸ್ಥಾನ, ಶ್ರೀ ಉಟಕನೂರು ಬಸವಲಿಂಗಯ್ಯ ತಾತ ಗುಡಿ, ಶ್ರೀ ತಿಮ್ಮಪ್ಪ ತಾತ, ಭೀರಪ್ಪ ಗುಡಿ, ಶುಂಕ್ಲಮ್ಮ ಗುಡಿ, ದ್ಯಾವಮ್ಮ ಗುಡಿ, ಮಲ್ಲಯ್ಯ ಗುಡಿಗಳಿಗೆ ಕಾಯಿ ಕರ್ಪೂರ ಅರ್ಪಿಸಿ ಉತ್ತಮವಾಗಿ ಮಳೆ ಬರಲೆಂದು ಪ್ರಾರ್ಥನೆ ಮಾಡಿದರು.
ನಂತರ ಗ್ರಾಮಸ್ಥರಿಂದ ಕಾಯಿ ಕರ್ಪೂರ ಅರ್ಪಿಸಿ ಮಳೆ ಬರಲೆಂದು ಪ್ರಾರ್ಥಿಸಿದರು.