ಲಕ್ಷ್ಮೇಶ್ವರ,ಮೇ29: ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಮದುವೆಯ ಸಂಭ್ರಮವೊಂದು ಮನೆ ಮಾಡಿತ್ತು ಮದುವೆಯ ಎಲ್ಲಾ ಸಿದ್ಧತೆಗಳು ಸಂಪ್ರದಾಯದಂತೆ ನಡೆದವು. ಹಂದರ ಹಾಲಗಂಬ, ಬೀಗರು ಬಿಜ್ಜರು ಎಲ್ಲರಲ್ಲೂ ಮದುವೆ ಸಂಭ್ರಮ.ಆದರೆ ಈ ಮದುವೆಗೆ ವಿಶೇಷವೆಂದರೆ ಡೊಳ್ಳಿನ ವಾದ್ಯ. ಇದು ರವಿವಾರ ಮಳೆಗಾಗಿ ನಡೆದ ಅದ್ದೂರಿ ಗೊಂಬೆಗಳ ಮದುವೆ.
ಮುಂಗಾರು ಮಳೆ ವಿಳಂಬ ಆಗಿದ್ದರಿಂದ ಇನ್ನೂ ಜಮೀನು ಹದಗೊಳಿಸಿಲ್ಲ ಮಳೆಯಾಗದೇ ಇಲ್ಲದೇ ಇರುವದರಿಂದ ಬೀಜ ರಸಗೊಬ್ಬರ ಸಿದ್ಧತೆ ಮಾಡಿಕೊಂಡು ಮೇಘರಾಜನ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಮೇಘರಾಜನ ಬರಮಾಡಿಕೊಳ್ಳಲು ರೈತ ಸಮುದಾಯದವರು ಒಗ್ಗಟ್ಟಾಗಿ ನಂಬಿಕೆ ಮತ್ತು ವಿಶ್ವಾಸದಂತೆ ಗೊಂಬೆ ಮದುವೆ ಮಾಡಿದರೆ ಮಳೆಯಾಗುತ್ತದೆ ಎಂದು ಒಂದು ಮದುವೆ ನಡೆಯುವ ರೀತಿಯಲ್ಲೇ ವಧು ಮತ್ತು ವರನ ಪಕ್ಷ ದವರು ಬೀಗರಾಗಿ ಮದುವೆ ನೆರವೇರಿಸಿದರು.
ಹೀಗೊಂದು ಮದುವೆ ಜರುಗಿ ಅಕ್ಷತೆ,ಊಟೋಪಚಾರ ಎಲ್ಲವು ಸಾಂಗವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಜಯವ್ವ ಪೂಜಾರ, ಬಸವವ್ವ ಪಾಟೀಲ್, ಪಾರವ್ವ ಪೂಜಾರ, ಸಾವಕ್ಕ ಪೂಜಾರ, ಬೂದವ್ವ ಪೂಜಾರ, ಶಾರವ್ವ ಗೋಜಗೊಜಿ, ತಿರಕವ್ವ ಬನ್ನಿ, ನೀಲವ್ವ ಪೂಜಾರ, ಲಕ್ಷ್ಮವ್ವ ಮುಳಗುಂದ, ಗಂಗಪ್ಪ ದುರಗಣ್ಣವರ, ಯಲ್ಲಪ್ಪ ಪೂಜಾರ, ಪುಟ್ಟವ್ವ ಛಬ್ಬಿ, ನಾಗರಾಜ ಕೋರಿ, ದೇವಪ್ಪ ಪೂಜಾರ, ಮಾರ್ತಾಂಡ ಬನ್ನಿ, ಬಸಪ್ಪ ಗುಡಗುಂಟಿ, ಪರಮೇಶ ಮುಳಗುಂದ, ಬೀರಪ್ಪ ಪೂಜಾರ, ಬಸಪ್ಪ ನೀಲಪ್ಪನವರ, ಸಿಂದೋಗೆಪ್ಪ ದುರಗಣ್ಣವರ, ಮಂಜುನಾಥ ಪೂಜಾರ, ಹನಮಂತಪ್ಪ ಬನ್ನಿ, ಹನಮಂತಪ್ಪ ಉಳ್ಳಟ್ಟಿ ಸೇರಿದಂತೆ ಮುಂತಾದವರು ಇದ್ದರು.