ಮಳೆಗಾಗಿ ಈದ್ಗಾದಲ್ಲಿ ಪ್ರಾರ್ಥನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.26:  ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದರೂ ತಾಲೂಕಿನಲ್ಲಿ ವಾಡಿಕೆಯಂತೆ ಮಳೆ ಬಾರದಿರುವುದರಿಂದ ಪಟ್ಟಣದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಎಲ್ಲಾ ಮಸೀದಿಯಾ ಮುಸ್ಲಿಂಬಾಂಧವರು ಸೇರಿ ಮಳೆಗಾಗಿ ವಿಶೇಷ ನಮಾಜ್ ಪ್ರಾರ್ಥನೆಯನ್ನು ಮಾಡಿದರು.
ಬರ ಹಾಗೂ ಮಳೆ ಅಭಾವದಿಂದ ಕುಡಿಯುವ ನೀರಿನ ಸಮಸ್ಯೆ ಬರಬಾರದು, ಮಳೆ ಬಂದರೆ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗಲಿವೆ. ಆದ್ದರಿಂದ ಮಳೆಗಾಗಿ ತೆಕ್ಕಲಕೋಟೆ ಪಟ್ಟಣದ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹೇಳಿಕೆ: ಮಳೆಗಾಲ ಆರಂಭವಾಗಿ ಎರಡು ತಿಂಗಳು ಮುಗಿಯುತ್ತ ಬಂದರೂ ತಾಲೂಕಿನಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಇದರಿಂದ ಜನ-ಜಾನುವಾರುಗಳ ಸ್ಥಿತಿ ಚಿಂತಾಜನಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಮುಸ್ಲಿಂ ಬಾಂಧವರಿಂದ ವಿಶೇಷವಾಗಿ ಮೂರುದಿನಗಳ ಕಾಲ ನಮಾಜ್ ನೆರವೇರಿಸಲಾತ್ತದೆ ಎಂದು ಇಮಾಮ್ ಮಸ್ತೂರ್ ವಲಿ ತಿಳಿಸಿದರು.