
ಚನ್ನಮ್ಮನ ಕಿತ್ತೂರು,mಂ.15:ಕಿತ್ತೂರಿನ ತಾಲೂಕಿನ ಕೃಷಿ ಹುಟ್ಟುವಳಿ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ ಪ್ರಯತ್ನಿಸಿ ಸಂಸ್ಥೆಯ ಅಧ್ಯಕ್ಷರಾದ ಬಿ.ಡಿ ಪಾಟೀಲ್, ಕಾರ್ಯದರ್ಶಿ ಬಿ.ಕೆ ಪಾಟೀಲ್ ಹಾಗೂ ನಿರ್ದೇಶಕರ ಪ್ರಯತ್ನದಿಂದ ಮಾರ್ಕೆಟಿಂಗ್ ಸೊಸೈಟಿಗೆ 50 ಮಳಿಗೆಗಳು ಮಂಜೂರು ಗೊಂಡಿವೆ.
ಶಾಸಕ ಮಹಾಂತೇಶ ದೊಡ್ಡಗೌಡರ ಮಳಿಗೆಗಳ ಕಟ್ಟಡದ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದವರು. ಕಿತ್ತೂರು ಅಭಿವೃದ್ಧಿಪಥ ದತ್ತ ಸಾಗುತ್ತಿದೆ. ಆ ದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಎರಡು ಅಂತಸ್ತಿನ 50 ಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು. ಬಡ್ಡಿ ಇಲ್ಲದೆ ಸರ್ಕಾರ ಈ ಮಳಿಗೆಗಳಿಗೆ 2.50 ಲಕ್ಷ ಸಾಲ ನೀಡಿದೆ. ಇದರ ಸದುಪಯೋಗ ಈ ಸಂಸ್ಥೆ ಪಡೆದುಕೊಳ್ಳಬೇಕು ಸರ್ಕಾರ ಕಿತ್ತೂರಿನ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಕೈ ಜೋಡಿಸಿದೆ ಮುಂದಿನ ದಿನದಲ್ಲಿಯೂ ಕಿತ್ತೂರಿನ ಅಭಿವೃದ್ಧಿಗೆ ನಾನು ಸದಾ ಸಿದ್ದ ಎಂದರು.
ಈ ವೇಳೆ ಟಿ ಏ ಪಿ ಸಿ ಎಂ ಅಧ್ಯಕ್ಷ ಬಿ ಡಿ ಪಾಟೀಲ್, ಕಾರ್ಯದರ್ಶಿ ಬಿಕೆ ಪಾಟೀಲ್, ನಿರ್ದೇಶಕರುಗಳಾದ ಶಂಕರ ಗೌಡ ಪಾಟೀಲ್, ಹರ್ಷ ಪಾಗದ, ಬಸಪ್ಪ ಕಾದ್ರೊಳ್ಳಿ, ಕಾಡೇಶ ಸೋನೆವಾಣಿ, ವಿ ಎಸ್ ಪಾಟೀಲ್, ಮಡಿವಾಳಪ್ಪ ಖೋದಾನಪೂರ, ಸಿದ್ದು ದೊಡ್ಡಮನಿ, ನಿಜಲಿಂಗಯ್ಯ ಹಿರೇಮಠ, ಡಿ ಆರ್ ಪಾಟೀಲ್, ರಾಜು ಗಾಣಗಿ, ಬಸವರಾಜ್ ಮಾತನವರ, ಕಿರಣ್ ಪಾಟೀಲ್ ಗಡಿನಾಡು ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಮ್ ಎಮ್ ರಾಜೀಭಾಯಿ, ಅಧ್ಯಕ್ಷ ಬಸವರಾಜ್ ಬಂಗಿ, ನ್ಯಾಯವಾದಿಗಳಾದ ಜಗದೀಶ್ ಬಿಕ್ಕನ್ನವರ್, ಶಿವಾನಂದ್ ಬೋಗುರ, ಹಂಚಿನಮನಿ ಸೇರಿದಂತೆ ಸಿಬ್ಬಂದಿ ಸಾರ್ವಜನಿಕರಿದ್ದರು.