ಮಳಿಗೆಗಳಿಗೆ ಧಿಡೀರ ಭೇಟಿ ಪರಿಶೀಲನೆ

ಯಾದಗಿರಿ : ಮೇ 31 : ರಸಗೊಬ್ಬರ ಮಾರಾಟಗಾರರ ಮಳಿಗೆಗಳಿಗೆ ಶ್ರೀ ಶ್ರೀನಿವಾಸ್ ಬಿ.ವೈ., ಮಾನ್ಯ ನಿರ್ದೇಶಕರು ಜಲಾನಯನ ಹಾಗೂ ಯಾದಗಿರಿ ಜಿಲ್ಲೆಯ ಕೃಷಿ ಇಲಾಖೆಯ ನೋಡಲ್ ಅಧಿಕಾರಿ ಅವರು ಧಿಡೀರ್ ಭೇಟಿ ನೀಡಿದೆ ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕರು ಅವರು ತಿಳಿಸಿದ್ದಾರೆ.

 2024ರ ಮೇ 30 ರಂದು ಶ್ರೀ ಶ್ರೀನಿವಾಸ್ ಬಿ. ವೈ., ಮಾನ್ಯ ನಿರ್ದೇಶಕರು ಜಲಾನಯನ ಹಾಗೂ ಯಾದಗಿರಿ ಜಿಲ್ಲೆಯ ಕೃಷಿ ಇಲಾಖೆಯ ನೋಡಲ್ ಅಧಿಕಾರಿಗಳು, ಹಾಗೂ ಶ್ರೀ ಕೆ. ಹೆಚ್. ರವಿ, ಜಂಟಿ ಕೃಷಿ ನಿರ್ದೇಶಕರು, ಯಾದಗಿರಿ, ಶ್ರೀಮತಿ ಮಂಜುಳಾ ಬಿ., ಉಪ ಕೃಷಿ ನಿರ್ದೇಶಕರು, ಯಾದಗಿರಿ ಮತ್ತು ಶ್ರೀ ಸುರೇಶ್ ಬಿ., ಸಹಾಯಕ ಕೃಷಿ ನಿರ್ದೇಶಕರು, ಯಾದಗಿರಿ ರವರ ತಂಡದೊಂದಿಗೆ ಯಾದಗಿರಿ ನಗರದ ರಸಗೊಬ್ಬರ ಮಾರಾಟಗಾರರ ಅಂಗಡಿಗಳು ಪರಿಶೀಲನೆ ಮಾಡಿದರು.
 ಅಂಗಡಿಗಳಲ್ಲಿರುವ ರಸಗೊಬ್ಬರ ದಾಸ್ತಾನು ಮತ್ತು ಪಿ.ಓ.ಎಸ್.ಯಂತ್ರದ ದಾಸ್ತಾನಿನಲ್ಲಿರುವ ವ್ಯತ್ಯಾಸಗಳನ್ನು ಪರಿಶೀಲಿಸಿದರು. ಹಾಗೂ ರಸಗೊಬ್ಬರ ಮಾರಾಟಗಾರರರಿಗೆ ಅಂಗಡಿಯಲ್ಲಿರುವ ದಾಸ್ತಾನು ಮತ್ತು ಪಿ.ಓ.ಎಸ್. ದಾಸ್ತಾನು ತಾಳೆಹೊಂದಬೇಕೆಂದು ತಿಳಿಸಿದರು. ಪಿ.ಓ.ಎಸ್.ನಲ್ಲಿ ದಾಸ್ತಾನು ಉಳಿದಲ್ಲಿ ಕೇಂದ್ರದಿಂದ ನಮ್ಮ ಜಿಲ್ಲೆಗೆ ಬರಬೇಕಾದ ದಾಸ್ತಾನು ಸಮಯದಲ್ಲಿ ಬರುವುದಿಲ್ಲವೆಂದು ತಿಳಿಹೇಳಿದರು. ಎಲ್ಲಾ ರೈತರಿಗೆ ಪಿ.ಓ.ಎಸ್. ಯಂತ್ರದ ಮುಖಾಂತರವೇ ರೈತರ ಹೆಬ್ಬೆರಳ ಗುರುತು sಸ್ಕಾ??ನಿಂಗ್ ಮಾಡಿ ಮತ್ತು ಆಧಾರ್ ಸಂಖ್ಯೆ ಪಡೆದು ವಿತರಿಸಬೇಕೆಂದು ತಿಳಿಸಿದರು. ಮುಂದುವರೆದು, ಎಲ್ಲಾ ರೈತರಿಗೆ ಬಿಲ್ಲು ನೀಡಬೇಕು ಹಾಗೂ ರಸಗೊಬ್ಬರ, ಬೀಜ ಮತ್ತು ಕೀಟನಾಶಕಗಳ ಎಮ್.ಆರ್.ಪಿ.ದರ, ದಾಸ್ತಾನು ವಿವರವನ್ನು ಅಂಗಡಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕೆಂದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.