ಮಳಖೇಡ ರೈಲ್ವೆ ನಿಲ್ದಾಣದಲ್ಲಿ ದಲಿತ ಸೇನೆಯಿಂದ ಭಾವಚಿತ್ರ ಅಳವಡಿಕೆ

ಸೇಡಂ, ಮಾ,05: ತಾಲೂಕಿನ ಮಳಖೇಡ ರೈಲ್ವೇ ಸ್ಟೇಷನ್ ನ ಆಫೀಸ್ ನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಹಾಕದೆ ಇರುವ ವಿಷಯ ತಿಳಿದು ಬಂದು ದಲಿತ ಸೇನೆ ಮಳಖೇಡ ತಂಡದಿಂದ ಸ್ಥಳಕ್ಕೆ ದೌಡಾಯಿಸಿ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡು ಸಿಬ್ಬಂದಿಯವರಿಂದಲೆ ಡಾ .ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಆಫೀಸ್ ನಲ್ಲಿ ಭಾವಚಿತ್ರ ಅಳವಡಿಸಲಾಯಿತು. ಈ ವೇಳೆಯಲ್ಲಿ ದಲಿತ ಸೇನೆ ವಲಯ ಅಧ್ಯಕ್ಷರಾದ ಭಗವಾನ್ ಭೊಚೀನ್, ಪುಟ್ಟು ನಂದೂರ್, ಶೋಯೆಬ್ ದಂಡೋತಿ,ಒಆ.ಉಮರ್, ಭಗವಾನ್ ನಿಂಗಮಾರಿ, ಮಲ್ಲಿಕಾರ್ಜುನ ಮಾಲಗತ್ತಿ,ಆದಿತ್ಯ ಎಂ.ಗುಡಿ, ಶಿವಾನಂದ ನಿಂಗಮಾರಿ ಉಪಸ್ಥಿತರಿದ್ದರು.