ಮಳಖೇಡ ಪಾದಯಾತ್ರೆ ಕೈಬಿಡಲು ನಿರ್ಧಾರ

ಕಲಬುರಗಿ, ಜ 14: ನರಿಬೋಳ ಸೇರಿ ಜೇವರಗಿ ತಾಲೂಕು ವಿವಿಧ ಗ್ರಾಮ ಪಂಚಾಯತಿ ಹಗರಣಗಳ ತನಿಖೆಗಾಗಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಮಳಖೇಡÀ ಚಲೋ ಪಾದಯಾತ್ರೆಯನ್ನು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಜಿಪಂ ಅಧಿಕಾರಿಗಳು ಕ್ರಮ ಕೈಗೊಂಡ ಪ್ರಯುಕ್ತ ಪಾದಯಾತ್ರೆ ಕೈ ಬಿಡಲು ನಿರ್ಧರಿಸಲಾಗಿದೆ.
ಈ ಕುರಿತು ಸುಮಾರು 12 ದಿನಗಳಿಂದ ಜಿಲ್ಲಾ ಪಂಚಾಯತಿ ಎದುರುಗಡೆ ಶ್ರೀರಾಮಸೇನೆ ಮತ್ತಿತರರು ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರವಣಕುಮಾರ ಡಿ ನಾಯಕ,ಶರಣಗೌಡ ಪೆÇೀಲಿಸ ಪಾಟೀಲ, ರಾಘವೇಂದ್ರ ಕುಲಕರ್ಣಿ, ಗುರುರಾಜ ಸುಬೇದಾರ,ಲಕ್ಷೀಕಾಂತ ಸ್ವಾದಿ ತಿಳಿಸಿದ್ದಾರೆ.