
ಕಲಬುರಗಿ,ಮಾ.17- ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ದರ್ಗಾ ಶರೀಫ್ ಹಜರತ್ ಸೈಯದಶಾಹ ಖಲಿಫತ್ ಉರ್ ರಮಹಮಾನ್ ಖಾದ್ರಿ ಖುತುಬ್ ಎ ದಖ್ಖನ್ 138ನೇ ವಾರ್ಷಿಕ ಉರುಸ್ ಮಹೋತ್ಸವ ಮಾ.23ರಿಂದ ಮಾ.26 ನಾಲ್ಕು ದಿನಗಳ ಕಾಲ ಜರುಗಲಿದೆ.
ದರ್ಗಾದ ಸಜ್ಜಾದ ನಶೀನ ಪೂಜ್ಯ ಹಜರತ್ ಅಲ್‍ಹಜ್ ಸೈಯದಶಾಹ ಮುಸ್ತಫಾ ಖಾದ್ರಿ ದಿವ್ಯ ಸಾನಿದ್ಯದಲ್ಲಿ ಮಾ.23ರಂದು ಗದ್ದುಗೆಗೆ ಅಭಿಷೇಕ, ಮಾ.24ರಂದು ಭವ್ಯ ಸಂದಲ ಮೆರವಣಿಗೆ, ಮಾ.25ರಂದು ಜುಲಸ್ ಎ ಪಂಖಾ, ರಾತ್ರಿ 8ಕ್ಕೆ ಎನ್.ಆರ್. ಆಲ್ ಇಂಡಿಯಾ ಮಾನವ ಧರ್ಮ ಸೇವಾ ಟ್ರಸ್ಟ್ ವಾರ್ಷಿಕ ಸಮ್ಮೇಳನ, ಮಾನವ ಧರ್ಮ ಚಿಂತನ ಸಭೆ. ನಂತರ ಖವ್ವಾಲಿ, ಗೀಗೀ ಪದಗಳು ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮಾ.26ರಂದು ಬೆಳಿಗ್ಗೆ ಜಿಯಾರತ್ ಫಾತೆಹಾಖಾನಿ, ಕುಸ್ತಿ ಪಂದ್ಯಾಟ ಜರುಗಲಿದೆ ಎಂದು ದರ್ಗಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.