
ಸೇಡಂ, ಮಾ,13: ಹಜರತ್ ಸೈಯದ್ ಶಾಹ ಖಲೀಪತ್ ಉರ್ ರೆಹಮಾನ್ ಖಾದ್ರಿ ಅವರ 138ನೇ ಹಾಗೂ ಹಜರತ್ ಅಲ್ಲಹಜ್ ಸೈಯದ್ ನೆಮತುಲ್ಲಾ ಖಾದ್ರಿ ಅಲ್ ಜಿಲಿ ರವರ 18 ನೇ ಉರ್ಸ್ ಜಾತ್ರೆ ಮಾ.23ರಿಂದ26ರವರೆಗೆ ನಡೆಯಲಿದೆ ಎಂದು ದರ್ಗದ ಪೀಠಾಧಿಪತಿಗಳಾದ ಹಜರತ್ ಸೈಯದ್ ಶಾಹ ಮುಸ್ತಫ ಖಾದ್ರಿ ತಿಳಿಸಿದರು.
ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಹಜರತ್ ಸೈಯದ್ ಶಾಹ ಖಲೀಪತ್ ಉರ್ ರೆಹಮಾನ್ ಖಾದ್ರಿ ದರ್ಗಾದಲ್ಲಿ ಕರೆಯಲಾಗಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ 25ರಂದು ನಡೆಯುವ ರಾತ್ರಿ 8 ಗಂಟೆಗೆ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ ಎಮ್ ಇಬ್ರಾಹಿಂ, ಕಲಬುರ್ಗಿ ಸಂಸದ ಡಾ. ಉಮೇಶ್ ಜಾದವ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಉದಯಕುಮಾರ್ ಪವಾರ್, ಶಾಸಕರಾದ ಶರಣಬಸಪ್ಪ ದರ್ಶನಪುರ್, ಬಸವರಾಜ್ ಮತ್ತಿಮುಡ್, ಮಾಜಿ ಶಾಸಕ ಬಿ ಆರ್ ಪಾಟೀಲ್, ಕರವೇ ಜಿಲ್ಲಾಧ್ಯಕ್ಷ ಶರಣು ಗದ್ದಗಿ, ವೈಎಸ್ ನಾರಾಯಣ್, ಜೆಡಿಎಸ್ ಮುಖಂಡರಾದ ಬಾಲರಾಜ್ ಗುತ್ತೇದಾರ್, ಪೆÇ್ರಫೆಸರ್, ಸಂಜಯ್ ಮಾಕಲ್ ಕೆಆರ್‍ಪಿ ಪಿ ಮುಖಂಡ ಜಿ ಲಲ್ಲೇಶ್ ರೆಡ್ಡಿ, ಆಗಮಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ವಿವರಣೆ ನೀಡಿದ ಪೂಜ್ಯರು 23 ರಂದು ಪ್ರಾರ್ಥನೆ, 24ರಂದು ಸಂದಲ ಮಳಕೇಡು ಕೂಡ ಬಿ ಸಂಗಾಬಿ ಮಳಖೇಡ್ ರೈಲ್ವೆ ಸ್ಟೇಷನ್ ರಾಜಶ್ರೀ ಸಿಮೆಂಟ್ ಫ್ಯಾಕ್ಟರಿ ಹಾಗೂ ದಿಗವ್ ಗ್ರಾಮಗಳಿಂದ ಸಂಧಾನ ಮೆರವಣಿಗೆ ನಂತರ ಹಜರ ಸೈಯಸ್ಯ ಮುಸ್ತಫ ಖಾತರಿ ರವರ ಅಮೃತ ಹಸ್ತದಿಂದ ಗಂದಲೇಪನ ಜರುಗುತ್ತದೆ 25ರಂದು ಚಿರಾಗಂ ದೀಪಾಲಂಕಾರ ರಾತ್ರಿ 8.30 ಗಂಟೆಗೆ ಮಾಡಕೇಡದಿಂದ ಬಂಕ ಮೆರವಣಿಗೆ ಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ಎನ್ ಆರ್ ಮಾನವ ಧರ್ಮ ಸೇವಾ ಸಮಿತಿ ಆಶ್ರಯದಲ್ಲಿ ಮಾನವ ಧರ್ಮ ಚಿಂತನ ಸಭೆ, ನಂತರ ಕವಾಲಿ ಹಾಗೂ ಗೀಗಿ ಕಾರ್ಯಕ್ರಮಗಳು ಜರುಗುವುದು, 26ರಂದು ಜಿಯಾರತ್ ಮುಂಜಾನೆ, 7:00ಗೆ ಫಾತೆಹಖಾನಿ, ಪುಷ್ಪಾರ್ಚನೆ ನಂತರ ಹಜರತ್ ಸಜ್ಜದ್ ನಝೀರ್‍ರವರ ಅಮೃತ ಅಸ್ತದಿಂದ ಪ್ರಸಾದ ವಿತರಣೆ ನಂತರ ಮಳಖೇಡ್ ಹಾಗೂ ಹೂಡಾ ಬಿ ಭಕ್ತರಿಂದ ಬೆಳ್ಳಿಖಡೆಗಳ ಕುಸ್ತಿ ಜರುಗುವುದು ಎಂದು ಹೇಳಿದರು. ಜಾತ್ರೆಯ ಕರಪತ್ರ ಬಿಡುಗಡೆ ಮಾಡಿದರು.
ಈ ವೇಳೆಯಲ್ಲಿ ವಕೀಲರಾದ ಶಿವಶರಣಪ್ಪ ರಾಜೇ ಬಿಜನಳ್ಳಿ , ನಾಗರಾಜ್ ನಂದೂರ್, ಕುಪ್ಪಣ್ಣ ಎಂ, ಆನಂದ್ ಕೊಳ್ಳಿ, ಮಲ್ಲಪ್ಪ, ಮಲ್ಲಿಕಾರ್ಜುನ್ ಇಟಗಿ, ಸೇರಿದಂತೆ ಹಲವರು ಇದ್ದರು.