ಮಳಖೇಡ ದರ್ಗಾಕ್ಕೆ ಭೇಟಿ ನೀಡಿದ ಗಾಲಿ ಜನಾರ್ಧನ ರೆಡ್ಡಿ

ಸೇಡಂ: ಮಾ.9:ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಸನ್ಮಾನ್ಯ ಶ್ರೀ ಗಾಲಿ ಜನಾರ್ಧನ ರೆಡ್ಡಿ ಹಾಗೂ ಸೇಡಂ ಕ್ಷೇತ್ರದ ಕೆಆರ್ ಪಿಪಿ ಪಕ್ಷದ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿಯವರು ಮಳಖೇಡದ ಖಲೀಪತ್ ರಹೇಮಾನ್ ದರ್ಗಾಕ್ಕೆ ಭೇಟಿ ನೀಡಿ ಮೌಲ್ವಿ ಹಜರತ್ ಸೈಯದ್ ಮುಸ್ತಫಾ ಖಾದ್ರಿಯವರ ಆಶಿರ್ವಾದ ಪಡೆದು ಪ್ರಾರ್ಥನೆ ಸಲ್ಲಿಸಿದರು.

ದರ್ಗಾಕ್ಕೆ ಭೇಟಿ ನೀಡಿದ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಪ್ರೀತಿಯಿಂದ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗಾಲಿ ಜನಾರ್ಧನ ರೆಡ್ಡಿಯವರು, ಹಿಂದೂ ಮುಸ್ಲಿಂ ಏಕತೆಯನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ಎತ್ತಿ ಹಿಡಿದು ಎಲ್ಲರೂ ಒಂದೇ ಎಂಬ ಭಾವನೆಯಿಂದ ಸಾಗುತ್ತಿದ್ದೇವೆ ಎಂದರು.
ಹಿಂದೂ ಮುಸ್ಲಿಂರೆಲ್ಲರೂ ಸಹೋದರರಂತೆ ಬಾಳುವುದನ್ನು ನಮ್ಮ ಪಕ್ಷ ಬಯಸುತ್ತಿದೆ ಎಂದು ತಿಳಿಸಿದರು.
ಮೊದಲಿನಿಂದಲೂ ಈ ಸಮುದಾಯದೊಂದಿಗೆ ಜೊತೆಯಾಗಿ ಇರುವುದನ್ನು ಸ್ಮರಿಸಿದ ಅವರು ಯಾವತ್ತೂ ಮುಸ್ಲಿಂ ಸಮುದಾಯದೊಂದಿಗೆ ಇರುವುದಾಗಿ ತಿಳಿಸಿದರು.

ಈ ವೇಳೆಯಲ್ಲಿ ಶಿವಲಿಂಗ ರೆಡ್ಡಿ ಪಾಟೀಲ ಬೆನಕನಹಳ್ಳಿ, ಅಯೂಬ್ ಖಾನ್, ಯೂಸೂಫ್ ಖಾನ್, ಇಕ್ಬಾಲ್, ರಾಮರೆಡ್ಡಿ ನಾಮವಾರ, ಗಿರೀಶ್ ನಾಗರಾಳ್, ಮಲ್ಲಿಕಾರ್ಜುನ ಮಾಲಿಪಾಟೀಲ, ವಿಜಯಕುಮಾರ್ ಮಳಖೇಡ, ಭೀಮಾಶಂಕರ ಕೊರವಿ, ರಾಘವೇಂದ್ರ ಅಗನೂರು, ಅಂಬರೀಷ್ ಧಾರಕ್, ಅಭಿಷೇಕ ಬಜಾರ್,ರಾಚಯ್ಯಸ್ವಾಮಿ,ಸ್ಥಾವರ ಮಠ, ಭೀಮರೆಡ್ಡಿ ಜಿಲ್ಲೆಡಪಲ್ಲಿ, ಸುರೇಶ್ ಧಾರಕ್ ಸೇರಿದಂತೆ ಮುಸ್ಲಿಂ ಸಮುದಾಯದ ಸಹೋದರರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.