ಮಳಖೇಡನಲ್ಲಿ ರೌಡಿಶೀಟರ್ ರೀ ಓಪನ್ ತನಿಖೆ ಮಾಡಿ ಕ್ಲೋಸ್ ಮಾಡುವೆ: ಎಸ್ ಪಿ ಇಶಾ ಪಂತ್

ಸೇಡಂ,ಸ,16: ಬಹಳ ವರ್ಷಗಳ ಹಿಂದೆ ಕ್ಲೋಸ್ ಆಗಿದ್ದ ಕೇಸ್ ಕೆಲವು ತಿಂಗಳಗಳ ಹಿಂದೆ ರೌಡಿಶೀಟರ್ ರೀ ಓಪನ್ ಮಾಡಿ ಕಡು ಬಡವರಿಗೆ ಉದ್ಯೋಗದಲ್ಲಿರುವವರಿಗೆ ವಿನಾಕಾರಣ ಸ್ಥಳೀಯ ಪಿಎಸ್ ಐ ಅವರು ತೊಂದರೆ ನೀಡುತ್ತಿದ್ದಾರೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಕಲಬುರಗಿ ಜಿಲ್ಲಾ ಪೆÇಲೀಸ್ ಅಧೀಕ್ಷಕರಾದ ಇಶಾ ಪಂತ್ (ಐ.ಪಿ.ಎಸ್ )(ಎಸ್ ಪಿ) ಅವರು ರೌಡಿ ಶೀಟರ್ ಓಪನ್ ಆಗುವುದಕ್ಕೆ ಕೆಲವು ಕಾರಣಗಳಿರುತ್ತವೆ ಅವುಗಳ ಬಗ್ಗೆ ತನಿಖೆ ಕೈಗೊಂಡು ಮುಕ್ತಿ ನೀಡುವೆ ಎಂದು ಹೇಳಿದರು.

ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಗುರುಗಂಗಾಧರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿಲಾಗಿದ ನಿಮ್ಮ ಮನೆ ಬಾಗಿಲಿಗೆ ಪೆÇಲೀಸ್ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಶಾಲಾ ಮಕ್ಕಳೊಂದಿಗೆ ಜ್ಯೋತಿ ಪ್ರಜ್ವಲಗೊಳಿ ಸಾರ್ವಜನಿಕರ ಉದ್ದೇಶಿಸಿ ಮಾತನಾಡಿದ ಅವರು ರಾತ್ರಿ ಪೆÇಲೀಸ್ ಗಸ್ತಿನಿಂದ ಅಪರಾಧಗಳ ಚಟುವಟಿಕೆ ಕಡಿಮೆಯಾಗುತ್ತವೆ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಸಿಪಿಐ ಎಸ್ ಎನ್ ಆನಂದ್ ರಾವ್, ಪಿಎಸ್ ಐ ಇಂದುಮತಿ
ಅವರಿಗೆ ಸೂಚಿಸಿದರು. ಬಂಧಿಸಿದ ವ್ಯಕ್ತಿಗಳನ್ನು ನಮ್ಮವರೆಂದು ಫೆÇೀನ್ ಮಾಡಬೇಡಿ,
ಹಗಲು ರಾತ್ರಿ ಎನ್ನದೆ ಜನರ ಸೇವೆಗಾಗಿ ಕೆಲಸ ಮಾಡುವಂತಹ ನಾವು ನಮ್ಮ ಸಿಬ್ಬಂದಿ ವರ್ಗದವರ ಸಹಕಾರಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರೂ.

ವೇದಿಕೆ ಮೇಲೆ ತಹಸೀಲ್ದಾರ್ ಬಸವರಾಜ ಬೆಣ್ಣಿ ಶಿರೂರು, ಸಿಪಿ ಐ ಆನಂದರಾವ್ ಪಿಎಸ್ ಐ ಇಂದುಮತಿ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ, ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಶಾಂತಾಬಾಯಿ ಸಿ,ತಳಕಿನ, ಅಬಕಾರಿ ಇಲಾಖೆಯ ಪಿಎಸ್ ಐ ರಮಾ ಕಪನೂರ ಇದ್ದರು.
ಈ ವೇಳೆಯಲ್ಲಿ ಗ್ರಾಮದ ಮುಖಂಡರಾದ ಗುರುರಾಜ ತಳಕಿನ, ರಾಜಶೇಖರ್ ಪುರಾಣಿಕ,ಸುಂದರ ಮಂಗಾ, ಜಮೀಲ್ ಆಲಂಪುರಿ, ತೌಸೀಫ್‍ಖಾನ್, ವಿಜಯಕುಮಾರರೆಡ್ಡಿ, ಅಂಬರೀಷ ಎಮ್ ಗುಡಿ, ಚನ್ನಪ್ಪ ಬಿಜನಳ್ಳಿ, ಜ್ಯೋತಿ ಪೂಜಾರಿ, ಶರಣಮ್ಮ ವಡ್ಡರ ಸೇರಿ ಹಲವರು ಎಸ್‍ಪಿ ಅವರಿಗೆ ವಿವಿಧ ವಿಷಯಗಳ ಕುರಿತು ಗಮನಕ್ಕೆ ತಂದರು.

ಸಿಪಿಐ ಆನಂದರಾವ್ ಪ್ರಾಸ್ತಾವಿಕ ಮಾತನಾಡಿದರೆ ಶಿಕ್ಷಕಿ ವಿದ್ಯಾ ಜೋಶಿ ನಿರೂಪಣೆ ಮಾಡಿದರು, ವಿಜಯಕುಮಾರ್ ರೆಡ್ಡಿ ವಂದಿಸಿದರು.

ಕಾಗಿನ ನದಿ ದಡದಲ್ಲಿರುವ ಸಮಖೇಡ ತಾಂಡಾ ಪ್ರವಾಹದಿಂದ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ಈ ತಾಂಡ ಸ್ಥಳಾಂತರಕ್ಕೆ ಜಮೀನು ಬೇಕಾಗಿದ್ದು ಜಮೀನು ಕೊಡುವವರು ಮಾಹಿತಿ ನೀಡಿದರೆ ಸರ್ಕಾರದಿಂದ ಕರದಿಸಿ ಅವರ ತಾಂಡ ಅಲ್ಲೇ ಅಭಿವೃದ್ಧಿ ಮಾಡಲಾಗುವುದು.

ಬಸವರಾಜ ಬೆಣ್ಣಿ ಶಿರೂರು ತಹಸಿಲ್ದಾರ್ ಸೇಡಂ


ರಾತ್ರಿ ಪೆÇಲೀಸ್ ಗಸ್ತು ತಿರುಗಾಡುವಂತೆ ಈಗಾಗಲೇ ಸಿಬ್ಬಂದಿ ವರ್ಗದವರಿಗೆ ತಿಳಿಸಿದ್ದೇನೆ ಅದರ ಜೊತೆಗೆ ಶಾಲಾ-ಕಾಲೇಜು ಬರುವ ಬೆಳಗೆ ಮತ್ತು ಸ್ವಯಂಕಾಲ ಮಕ್ಕಳಿಗೆ ತೊಂದರೆ ನೀಡುವರು ಕಂಡು ಬಂದರೆ ತಕ್ಷಣ ಬಂದಿಸುವಂತೆ ಸೂಚಿಸಿದ್ದೇನೆ.

ಸಿಪಿ ಐ ಆನಂದರಾವ್ ಸೇಡಂ

ಗ್ರಾಮಗಳಲ್ಲಿ ಪಟ್ಟಣದಲ್ಲಿ ಸಮಸ್ಯೆಗಳು ಕಂಡು ಬಂದರೆ ಸಾರ್ವಜನಿಕರು 112 ಗೆ ಕರೆ ಮಾಡುವ ಮೂಲಕ ನಮ್ಮ ಸಿಬ್ಬಂದಿ ವರ್ಗದವರು ತಕ್ಷಣ ಬಂದು ಪರಿಹಾರ ಕಲ್ಪಿಸಿ ಕೊಡುವರು.

ಎಸ್ ಪಿ ಇಶಾ ಪಂತ್ ಕಲಬುರ್ಗಿ

ಕಲ್ಯಾಣ ಕರ್ನಾಟಕದಲ್ಲಿ ಬರುವ ಪ್ರತಿ ಜಿಲ್ಲೆಗಳಲ್ಲಿ ತಾಲೂಕುಗಳಲ್ಲಿ ಹಳ್ಳಿಗಳಲ್ಲಿ ಕೆರೆ ಕಟ್ಟು ನಿರ್ಮಿಸುವ ಮೂಲಕ ಬಿಸಿಲು ನಾಡು ತೊಲಗಿಸಿ ತಂಪಾದ ನಾಡು ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗುರಿ ಹೊಂದಿದೆ.

ಸತೀಶ್ ಸುವರ್ಣ
ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕರು ಕಲಬುರ್ಗಿ