ಮಳಖೇಡದ ಬದಲು ಆನೇಗುಂದಿ ಆರಾಧನಾ ಮಹೋತ್ಸವ ವಿರೋಧಿಸಿ ಬೃಹತ್ ಪ್ರತಿಭಟನೆ

ಕಲಬುರಗಿ,ಜೂ.26: ಸೇಡಂ ತಾಲ್ಲೂಕಿನ ಮಳಖೇಡವನ್ನು ಬಿಟ್ಟು ಆನೇಗುಂದಿಯಲ್ಲಿ ಕೆಲವು ಧಾರ್ಮಿಕ ಫುಂಡರು ಜುಲೈ 6 ಮತ್ತು 7ರಂದು ಶ್ರೀ ಜಯತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದು, ಕೂಡಲೇ ಆ ಆರಾಧನಾ ಮಹೋತ್ಸವವನ್ನು ರದ್ದುಪಡಿಸಲು ಕೊಪ್ಪಳ್ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರವು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ವಿಪ್ರ ಸಮುದಾಯದವರು ಬೃಹತ್ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಜಯತೀರ್ಥರ ಮೂಲ ವೃಂದಾವನವು ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡದಲ್ಲಿದೆ. ಆದಾಗ್ಯೂ, ಗಂಗಾವತಿ ತಾಲ್ಲೂಕಿನ ಆನೇಗುಂದಿಯ ನವ ವೃಂದಾವನದಲ್ಲಿ ಜಯತೀರ್ಥರ ಮೂಲ ವೃಂದಾವನವಿದೆ ಎಂದು ಹೇಳಿ ಆರಾಧನೆ ಮಾಡುವುದಾಗಿ ಆಮಂತ್ರಣ ಕೊಟ್ಟಿರುವ ಧಾರ್ಮಿಕ ಪುಂಡರ ಕುಕೃತ್ಯವನ್ನು ಸರ್ಕಾರ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೂಡಲೇ ಆನೇಗುಂದಿಯಲ್ಲಿನ ಆರಾಧನಾ ಮಹೋತ್ಸವ ರದ್ದುಪಡಿಸಿ, ಧಾರ್ಮಿಕ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಯತೀರ್ಥರ ಭಕ್ತವೃಂದದ ಡಾ. ಗುರು ಮಧ್ವಾಚಾರ್ಯ ನವಲಿ, ಲ್ಲಿ ಸಾಂಸ್ಕøತಿಕ ಸೌರಭದ ಡಾ. ಶ್ರೀನಿವಾಸ್ ಸಿರನೂರಕರ್, ಕನ್ನಡ ಸಾಹಿತ್ಯ ಬಳಗದ ಡಾ. ಕಾಶಿಲಿಂಗಯ್ಯ ಮಠ್, ಹರಿದಾಸ ಸಾಹಿತ್ಯ ವಾಹಿನಿ ವೇದಿಕೆಯ ಗೋಪಾಲಾಚಾರ್ಯ ಅಕಮಂಚಿ, ಆದರ್ಶ ವಿದ್ಯಾಪೀಠದ ಡಾ. ಹನುಮಂತಾಚಾರ್ಯ ಸರಡಗಿ, ರಾಮಾಚಾರ್ಯ ಘಂಟಿ, ಪಾಂಡುರಂಗರಾವ್ ದೇಶಮುಖ್, ಅನಂತ್ ಗುಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರೂ ಸೇರಿದಂತೆ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳು, ಕನ್ನಡ ಸಾಹಿತ್ಯ ಬಳಗ, ಸಾಂಸ್ಕøತಿಕ ಸೌರಭ, ಹರಿದಾಸ ಸಾಹಿತ್ಯ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪೇಜಾವರ್ ಸೇನೆ, ಸತ್ಯಾತ್ಮ ಸೇನೆ, ಪಾಂಡುರಂಗ್ ಯುವಕ ಸಂಘ, ಮೋತಕಪಲ್ಲಿ ಅರ್ಚಕರ ಸಂಘ, ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ, ಶ್ರೀರಾಮ್ ಪರಿಷತ್, ಜಿಲ್ಲಾ ಬ್ರಾಹ್ಮಣ ಸಂಘ, ಸಮಸ್ತ ನಾಗರಿಕರ ವೃಂದದವರು ಪಾಲ್ಗೊಂಡಿದ್ದರು.