ಮಳಖೇಡದಲ್ಲಿ ಜಯತೀರ್ಥರ ರಥೋತ್ಸವ

ಕಲಬುರಗಿ: ಜು.19:ಜಯತೀರ್ಥರ ಮೂಲವೃಂದಾವನ ಸನ್ನಿಧಾನವಾದ ಸೇಡಂ ತಾಲೂಕಿನ ಮಳಖೇಡದಲ್ಲಿ ಶ್ರೀ ಜಯತೀರ್ಥರ ಆರಾಧನೆ ನಿಮಿತ್ತ ಜೋಡು ರಥೋತ್ಸವ ಸಂಭ್ರಮದಿಂದ ಜರುಗಿತು.
ಟೀಕಾಚಾರ್ಯರ ಮಧ್ಯಾರಾದನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ತಮಗಳು ನಡೆದವು. ಬೆಳಗ್ಗೆ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರಿಂದ ವಿದ್ಯಾರ್ಥಿಗಳಿಗೆ ಸುಧಾ ಪಾಠ, ಮುದ್ರಾಧಾರಣೆ, ರಥಾಂಗ ಹೋಮ, ನಂತರ ಶ್ರೀಗಳಿಂದ ಜೋಡು ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಅಪಾರ ಭಕ್ತ ಸಮೂಹದ ನಡುವೆ ಸಂಭ್ರಮದಿಂದ ರಥೋತ್ಸವ ನೆರವೇರಿತು.
ನಂತರ ಶ್ರೀಗಳಿಂದ ಶ್ರೀ ದಿಗ್ವಿಜಯ ಮೂಲ ರಾಮದೇವರ ಪೂಜೆ ನಡೆಯಿತು.
ಮುಂಬಯಿಯ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ.ವಿದ್ಯಾಸಿಂಹಾಚಾರ್ಯ ಮಾಹುಲಿ, ಮಠದ ವ್ಯವಸ್ಥಾಪಕ. ವೆಂಕಣ್ಣಾಚಾರ್ಯ ಪೂಜಾರ, ಪಂ.ಡಾ. ಗುರುಮಧ್ವಾ ಚಾರ್ಯ ನವಲಿ, ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ. ಪ್ರಸನ್ನಾಚಾರ್ಯ ಜೋಶಿ, ಮಠಾಧಿಕಾರಿ ರಾಮಾಚಾರ್ಯ ಘಂಟಿ, ಕಮಲಾಕರ ಕುಲಕರ್ಣಿ, ವೆಂಕಟೇಶಾಚಾರ್ಯ ಕಡಿವಾಳ, ಅಧ್ಯಕ್ಷ ರವಿ ಲಾತೂರಕರ, ಮನೋಹರ ಜೋಷಿ,ಬಾಲಕೃಷ್ಣ ಲಾತೂರಕರ, ಅಶೋಕ ಕುಲಕರ್ಣಿ ಗೌರಕರ್, ಗುಂಡಾಚಾರ್ಯ ನರಬೋಳಿ, ಶ್ರೀನಿವಾಸಾಚಾರ್ಯ ನೆಲೋಗಿ, ಸೇರಿ ಅಪಾರ ಭಕ್ತರು ಪಾಲ್ಗೊಂಡರು.