ಮಲ ಹೊರುವ ಪದ್ದತಿಗೆ ಮುನ್ನುಡಿ ಹಾಡಿದ ಹನೂರು ಪಟ್ಟಣ ಪಂಚಾಯ್ತಿ

ಸಂಜೆವಾಣಿ ವಾರ್ತೆ
ಹನೂರು ಏ 15 :- ಮಲ ಹೊರುವ ಪದ್ದತಿ ವಿರುದ್ದ ಅರಿವು ಮೂಡಿಸಿ ಕ್ರಮಕ್ಕೆ ಮುಂದಾ ಗ ಬೇಕಾದ ಪಟ್ಟಣ ಪಂಚಾಯ್ತಿ ಅಧಿಕಾರಿಗಳೇ ಪೌರಕಾರ್ಮಿಕರಿಂದ ಸಾರ್ವತ್ರಿಕವಾಗಿ ಮಲ ಹೊರಿಸುವ ಮೂಲಕ ಕಾರ್ಮಿಕರನ್ನು ಅಪಮಾನಗೊಳಿಸಿ ಅಮಾನವೀಯ ಕೃತ್ಯ ಎಸಗಿರುವ ಅಮಾನುಷ ಘಟನೆ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜರುಗಿದೆ.
ಪ್ರಕರಣದ ವಿವರ : ಪಟ್ಟಣ ಪಂಚಾಯ್ತಿ ಕಚೇರಿಯ ಕೆಳಗಡೆಯೇ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಬೃಹತ್ ಗುಂಡಿಯಲ್ಲಿ ತುಂಬಿದ ಮಲವನ್ನು ಗುರುವಾರ ಮುಂಜಾನೆ ಅವೈಜ್ಞಾನಿಕವಾಗಿ ಪಟ್ಟಣ ಪಂಚಾಯ್ತಿ ಜೆಸಿಬಿ ಯಂತ್ರದಿಂದ ಪಟ್ಟಣದಲ್ಲಿನ ಕಸ ಸಾಗಿಸುವ ಟ್ರಾಕ್ಟರ್ ಗೆ ತುಂಬಿ ಹಲವು ಭಾರಿ ಸಾಗಿಸಲಾಗುತ್ತಿದ್ದಾಗ ಬಹುತೇಕ ಪಾಲು ಮಲ ಪಟ್ಟಣ ಪಂಚಾಯ್ತಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಅಂಗಡಿ ಮಳಿಗೆಗಳ ಮುಂದೆ ಹಾಗೂ ರಸ್ತೆಯುದ್ದಕ್ಕೂ ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದು ಬಸ್ ಗಾಗಿ ನಿಂತ ಪ್ರಯಾಣಿಕರು, ಹಾದಿ ಹೋಕರು, ಅಂಗಡಿ ಮಾಲೀಕರುಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾ ದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.
ಇದರಿಂದ ವಿಚಲಿತರಾದ ಪಟ್ಟಣ ಪಂಚಾಯ್ತಿ ಅಧಿಕಾರಿ ಆರೋಗ್ಯ ನಿರೀಕ್ಷಕರವರುಗಳು ಪಟ್ಟಣ ಪಂಚಾಯ್ತಿಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರಿಂದಲೇ ರಸ್ತೆಯ ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಮಲವನ್ನು ಸಾರ್ವಜನಿಕರ ಸಮ್ಮುಖದ ಲ್ಲಿಯೇ ಮಮುಟಿಯಿಂದ ಪ್ಲಾಸ್ಟಿಕ್ ಬುಟ್ಟಿಗೆ ತುಂಬಿ ತಲೆ ಮೇಲೆ ಹೊತ್ತು ಪಟ್ಟಣದ ಕಸ ಸಾಗಿಸುವ ಟೆಂಪೆÇೀದಲ್ಲಿ ತುಂಬಿ ಸಾಗಿಸುವಂತೆ ಮಾಡುವ ಮೂಲಕ ಪೌರ ಕಾರ್ಮಿಕರನ್ನು ಸಾರ್ವತ್ರಿಕವಾಗಿ ಅಪಮಾನಗೊ ಳಿಸುವುದರ ಜತೆಗೆ ಅಮಾನವೀ ಯತೆ ಮೆರೆದಿದ್ದಾರೆ.
ಈ ಅಮಾನವೀಯ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಖಾಸಗಿ ವ್ಯಕ್ತಿಗಳು ಸೆರೆಹಿಡಿದು ಮಾಧ್ಯಮಗಳವರಿಗೆ ನೀಡಿದ್ದಾರೆ. ಅಲ್ಲದೆ ಸದರಿ ಘಟನೆಯ ದೃಶ್ಯಾವಳಿಗಳು ಪಟ್ಟಣ ಪಂಚಾಯ್ತಿ ಮುಖ್ಯ ದ್ವಾರದಲ್ಲೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಪಟ್ಟಣ ಪಂಚಾಯ್ತಿಯಲ್ಲಿ ಮಲ ಸಾಗಿಸಲೆಂದೇ ಸೈಕಿಂಗ್ ಯಂತ್ರ ವಿದೆಯಾದರೂ ಅದನ್ನು ಬಳಸದೆ ಪಂಚಾಯ್ತಿಯ ಜೆಸಿಬಿ ಹಾಗೂ ಕಸ ಸಾಗಣೆ ಟ್ರಾಕ್ಟರ್ ಮತ್ತು ಟೆಂಪೆÇೀವನ್ನು ಬಳಸಿಕೊಳ್ಳುವುದರ ಜತೆಗೆ ಪೌರಕಾರ್ಮಿಕರನ್ನು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾದವಾಗಿದೆ.
ಸಾಲದೆಂಬಂತೆ ಸಾರ್ವಜನಿಕ ಶೌಚಾಲಯದ ಶೌಚ ಗುಂಡಿ ಯಿಂದ ತೆರೆದ ವಾಹನಗಳಲ್ಲಿ ತುಂಬಿದಂತಹ ಬಹುಪಾಲು ದ್ರವ ರೂಪದ ಮಲವನ್ನು ಸಾರ್ವತ್ರಿಕ ಪ್ರದೇಶದ ಹಾದಿ ಯುದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಿಕೊಂಡು ಹೋಗುವುದರ ಜತೆಗೆ ಬಯಲು ಪ್ರದೇಶದಲ್ಲೇ ಸುರಿಯುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡದೆ ಅನೈರ್ಮಲ್ಯಕ್ಕೆ ಮೂಲ ಕಾರಣರಾಗುವ ಮೂಲಕ ಸಾಂಕ್ರಾಮಿಕ ರೋಗ ರುಜಿನಗಳಿಗೆ ನಾಂದಿ ಹಾಡಿ ನಾಗರೀಕರ ಜೀವದ ಜತೆ ಚೆಲ್ಲಾಟ ಆಡಿದ್ದಾರೆ.
ಕಾರ್ಮಿಕರ ದಿನಾಚರಣೆ ಯಂದು ಪೌರಕಾರ್ಮಿಕರನ್ನು ಸನ್ಮಾನಿಸುವಂತಹ ಬೂಟಾಟಿಕೆ ತೋರುವ ಪಂಚಾಯ್ತಿ ಅಧಿಕಾರಿಗಳು ವಾಸ್ತವದಲ್ಲಿ ಅವರಿಂದಲೇ ಮಲ ಹೊರಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಂಡಿರುವುದರ ವಿರುದ್ದ ತಪ್ಪಿತಸ್ತರ ವಿರುದ್ದ ಶಿಸ್ತು ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಿ ಮುಂದೆಂದೂ ಇಂತಹ ಮಲ ಹೊರುವ ಪದ್ದತಿ ಮರುಕಳಿಸದಂತೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಪ್ರಬುದ್ದ ನಾಗರೀಕರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಕೊಳಚೆ ನೀರಲ್ಲ..? ಒಬ್ಬ ಜವಾಬ್ದಾರಿಯುತ ಮುಖ್ಯಾಧಿಕಾರಿಯಾಗಿರುವ ಇವರು ಮಾಡಿರುವ ಇಂತಹ ನೀಚ ಘೋರ ಅಕ್ಷಮ್ಯ ಅಪರಾದಕ್ಕೆ ಜಿಲ್ಲಾಡಳಿತ ಮೀನ-ಮೇಷ ಎಣಿಸದೆ ಕೂಡಲೇ ಕೂಲಂಕುಷ ವಿಚಾರಣೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಪಟ್ಟಣದ ನಾಗರೀಕರ ಒಕ್ಕೊರಲ ಆಗ್ರಹ.