ಮಲ ಹೊರುವ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ತಡೆಯುವಂತೆ ಆಗ್ರಹಿಸಿ ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಕಲಬುರಗಿ : ಆ.1:ಮಲ ಹೊರುವ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ತಡೆಯುವಂತೆ ಆಗ್ರಹಿಸಿ ಸಫಾಯಿ ಕರ್ಮಚಾರಿಗಳ ಆಂದೋಲನದ ಸದಸ್ಯರು ಸರ್ದಾರ್ ವಲ್ಲಭಭಾಯಿ ವೃತ್ತದಲ್ಲಿ ಪಟೇಲ್ ಪ್ರತಿಭಟನೆ ನಡೆಸಿದರು. ಮ್ಯಾನ್ಯುವಲ್ ಸ್ಕ್ಯಾವೆಂಜರ್‍ನಿಂದ ಕಳೆದ 7 ದಿನಗಳಲ್ಲಿ 11 ಜನ ಸಫಾಯಿ ಕರ್ಮಚಾರಿಗಳು ಮೃತಪಟ್ಟಿದ್ದಾರೆ. ಈ ಅನಿಷ್ಟ ಪದ್ಧತೆ ತಡೆಗೆ ಕಠಿಣ ತೆಗೆದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರಧಾನಿಗಳು ತಮ್ಮ ಮೌನ ಮುರಿದು ಈ ಬಗ್ಗೆ ಮಾತನಾಡಬೇಕು. ಮಲ ಹೊರುವ ಪದ್ಧತಿಗೆ ಬೆಂಬಲ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪಾಲನೆ ಆಗಬೇಕು ಎಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಸಫಾಯಿ ಕರ್ಮಚಾರಿ ಅಂದೋಲನದ ಸಂಚಾಲಕ ರಾಜಕುಮಾರ ಘವಾರಿಯಾ, ರಾಜ್ಯ ಸಂಚಾಲಕ ಡಿ.ಬಾಬುಲಾಲ್, ಕಮಿಟಿ ಮೇಬರ್ ನರ್ಮದಾ ವಿಶಾಲ್, ಘಂಟಲಪ್ಪ, ದೀಪಕ್ ಇದ್ದರು.