ಮಲ್ಲೇಶ್ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಚಿತ್ತಾಪುರ:ನ.23: ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ ಇವರಿಂದ ದೇಶ ನಾಶವಾಗುತ್ತಿದೆ ಎಂಬ ವಿವಾದಿತ ಹೇಳಿಕೆ ನೀಡಿರುವ ಮಲ್ಲೇಶ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯ ಮಂತ್ರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ತಾಲೂಕು ಬ್ರಾಹ್ಮಣ ಸಂಘ ಗ್ರೇಡ್-2 ತಹಶಿಲ್ದಾರ ಅಮೀತ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

ನವೆಂಬರ 15,ಮಂಗಳವಾರ ಮೈಸೂರಿನ ರಾಮಾಗೋವಿಂದ ರಂಗಮಂದಿರದಲ್ಲಿ ನಡೆದ ಸಿದ್ಧರಾಮಯ್ಯ 75 ಎನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗು ಸಾಧ್ಯದ ವಿರೋಧ ಪಕ್ಷದ ನಾಯಕ, ಸಿದ್ಧರಾಮಯ್ಯನವರ ಉಪಸ್ಥಿತಿಯಲ್ಲಿ ಅವರ ಆಪ್ತ ಮಲ್ಲೇಶ್ ಅವರು ವಿನಾಕಾರಣ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಟ್ಟುಕೊಂಡು, ಸಮಾಜ ಬಾಂಧವರಿಗೆ ಅವಮಾನ ಆಗುವ ರೀತಿಯಲ್ಲಿ, ಸಮಾಜದಲ್ಲಿ ಬ್ರಾಹ್ಮಣರ ಬಗ್ಗೆ ಕೀಳರಿಮೆ ಹುಟ್ಟಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ ಇವರಿಂದ ದೇಶ ನಾಶವಾಗುತ್ತಿದೆ ಎಂಬ ವಿವಾದಿತ ಹೇಳಿಕೆಯ ಮೂಲಕ ಸಮಸ್ತ ಬ್ರಾಹ್ಮಣ ಸಮುದಾಯದ
ವಿರುದ್ಧ ದ್ವೇಷ ಭಾವನೆ ಮೂಡಿಸುತ್ತಿದ್ದು ಆ ಮೂಲಕ ಸಮಾಜದ ಸ್ವಾಸ್ಥ್ಯ ಕದಡಿಸುತ್ತಿದ್ದಾರೆ ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ನೋವು ಉಂಟಾಗಿದೆ ಎಂದರು.

ವಿವಾದಿತ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನಿಸಿದ ಮಲ್ಲೇಶ್ ಹಾಗು ಸದರಿ ಹೇಳಿಕೆಯನ್ನು ವಿರೋಧಿಸದೆ ಅದಕ್ಕೆ ಅನುಮೋದನೆ ನೀಡಿದ ಸಂವಿಧಾನಾತ್ಮಕ ಸ್ಥಾನದಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಹಾಗು ಸಧ್ಯದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ವಿರುದ್ಧ ಕರ್ನಾಟಕ ಸರ್ಕಾರ ಈ ಕೂಡಲೆ ಪ್ರಕರಣ ದಾಖಲಿಸಿ ಮಲ್ಲೇಶ್ ಅವರನ್ನು ಧಾರ್ಮಿಕ ಭಾವನೆ ಕೆರಳಿಸುವುದು (ಐಪಿಸಿ 129(ಎ) ಹಾಗೂ ದ್ವೇಷ ಭಾವನೆ ಹೆಚ್ಚಿಸುವ (ಐಪಿಸಿ 153 (ಬಿ) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು

ಈ ಸಂದರ್ಭದಲ್ಲಿ ಸಮಾಜದ ತಾಲೂಕ ಗೌರವ ಅಧ್ಯಕ್ಷ ದೇವಿದಾಸ್ ಕುಲಕರ್ಣಿ, ಅಧ್ಯಕ್ಷ ಗಿರೀಶ್ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಪ್ರಧಾನ ಕಾರ್ಯದರ್ಶಿ ಅನಂತನಾಗ ದೇಶಪಾಂಡೆ, ಪ್ರದೀಪ್ ಕುಲಕರ್ಣಿ,ಪ್ರಕಾಶ್ ಕುಲಕರ್ಣಿ,ನರಹರಿ ಮೋಹರಿರ್, ಸಂಜೀವ ಕುಲಕರ್ಣಿ,ಸುಧಾಕರ್ ರಾವ್ ಕುಲಕರ್ಣಿ,ಆನಂದ ಪಟವಾರಿ,ಸ್ವಪ್ನಾ ಪಾಟೀಲ, ರಾಘವೇಂದ್ರ ಜಾನೀಭ,ಪವನ್ ಜ್ಯೋಷಿ, ರಾಘವೇಂದ್ರ ಡೋಣಗಾಂವ,ಶ್ರೀಹರಿ ಭಟ್,ರಾಜೀವ್ ಕುಲಕರ್ಣಿ, ನರಸಿಂಹ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.