ಮಲ್ಲೇಶ್ವರಂ ಪಿಜಿ ರಹಸ್ಯ ಬಿಚ್ಚಿಟ್ಟ ಸಿಡಿ ಯುವತಿ

ಬೆಂಗಳೂರು, ಮಾ.೩೧- ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಯುವತಿಯು ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖಾಧಿಕಾರಿಗಳ ಮುಂದೆ ಸಿಆರ್ಪಿಸಿ ೧೬೧ ಅಡಿ ಹೇಳಿಕೆ ದಾಖಲಿಸಿ ಮಲ್ಲೇಶ್ವರಂ ಪಿಜಿಯ ರಹಸ್ಯ ಬಿಚ್ಚಿಟ್ಟಿದ್ದಾರೆ
ಮೊದಲ ಬಾರಿಗೆ ವಿಧಾನಸೌಧಕ್ಕೆ ಹೋಗಿದ್ದಾಗ ನನಗೆ ಮೊಬೈಲ್ ನಂಬರ್ ಕೊಟ್ಟು ಯಾರಿಗೂ ಹೇಳಬಾರದು ಎಂದು ಮಲ್ಲೇಶ್ವರಂ ಪಿಜಿ ಎಂದು ರಮೇಶ್ ಜಾರಕಿಹೊಳಿ ಸೇವ್ ಮಾಡಿಸಿದ್ದನ್ನು ವಿಚಾರಣೆಯಲ್ಲಿ ಯುವತಿ ತಿಳಿಸಿದ್ದಾರೆ.
ಬಳಿಕ ಸಹಕಾರ ನೀಡಬೇಕೆಂದು ನನ್ನ ಮೇಲೆ ಎರಡು – ಮೂರು ಸಲ ದೈಹಿಕ ಸಂಪರ್ಕ ಬೆಳೆಸಿದ್ದರು. ನಮ್ಮ ಭಾಗದಲ್ಲಿ ಅವರು ಪ್ರಭಾವಿ ಸಚಿವರು ಏನಾದರೂ ಮಾಡುತ್ತಾರೆ ಎಂದು ಭಯಗೊಂಡು ಸುಮ್ಮನಿದ್ದೆ. ಆ ವೇಳೆ ನನಗೆ ನನ್ನ ಮೇಲೆಯೇ ಜಿಗುಪ್ಸೆ , ಭಯ ಕಾಡಿತ್ತು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಯಿ ಬಳಿ ಈ ವಿಚಾರ ಹೇಳಲಿಲ್ಲ ಎಂದು ಕೇಳಿದಕ್ಕೆ ಉತ್ತರಿಸಿದ ಯುವತಿ ಹೇಗೆ ಹೇಳೋಕೆ ಸಾಧ್ಯ ಸರ್. ಯಾವ ಮಗಳು ತಾನೇ ತನ್ನ ಪೋಷಕರ ಬಳಿ ಇಂಥ ವಿಚಾರ ಹೇಳಿಕೊಳ್ಳೋಕೆ ಸಾಧ್ಯ. ಅದೂ ಅಲ್ಲದೇ ಲೈಂಗಿಕ ದೌರ್ಜನ್ಯ ನಡೆಸುವುದನ್ನು ರಮೇಶ್ ಜಾರಕಿಹೊಳಿ ವಿಡಿಯೋ ಮಾಡಿ ಇಟ್ಟುಕೊಂಡಿದ್ದರು. ಆಗಾಗ ಕಾಲ್ ಮಾಡಿ ಬರುವಂತೆ ಹೇಳುತ್ತಿದ್ದರು. ಭಯಬಿದ್ದು ಹೋಗುತ್ತಿದ್ದೆ. ಅಲ್ಲದೇ ಅಶ್ಲೀಲವಾಗಿ ಬೈಯುತ್ತಿದ್ದರು. ನನಗೆ ಹಿಂಸೆಯಾಗಿ ಈ ವಿಚಾರವನ್ನು ಸ್ನೇಹಿತ ಶ್ರವಣ್ ಬಳಿ ಹೇಳಿದೆ. ಶ್ರವಣ್ ನನ್ನ ಕ್ಲಾಸ್ಮೇಟ್. ವಿಟಿಯು ಪ್ರತಿಭಟನೆ ವೇಳೆ ಪರಿಚಯವಾಗಿದ್ದ. ಶ್ರವಣ್ ಮೂಲಕ ನರೇಶಣ್ಣನ ಪರಿಚಯವಾಯಿತು.
ನನಗೆ ಆಗುತ್ತಿರುವ ಹಿಂಸೆ ಬಗ್ಗೆ ಹೇಳಿದ್ದೆ. ಸಾಕ್ಷ್ಯಾಧಾರಗಳಿಲ್ಲದೇ ಏನು ಆಗುವುದಿಲ್ಲ ಅಂದಿದ್ದರು. ಹೀಗಾಗಿ ನಾನು ವಿಡಿಯೋ ಮಾಡಿಕೊಂಡು ಆರ್ಟಿ ನಗರದ ಪಿಜಿಯಲ್ಲಿ ಇಟ್ಟಿದ್ದೆ. ಇನ್ನೊಂದು ಕಾಪಿ ನರೇಶಣ್ಣನ ಕೈಗೆ ಕೊಟ್ಟಿದ್ದೆ. ವಿಡಿಯೋ ಯಾರು ಹೊರಗೆ ಬಹಿರಂಗಪಡಿಸಿದರು ಎನ್ನುವುದು ಗೊತ್ತಿಲ್ಲ. ಸ್ನೇಹಿತ ಆಕಾಶ್ಗೆ ಈ ವಿಷಯ ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.