ಮಲ್ಲೇದೇವರ ಗುಡ್ಡ ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಬಾಲಮ್ಮ ಬಾಗ್ಲಿ ಅವಿರೋಧವಾಗಿ ಆಯ್ಕೆ

ಅರಕೇರಾ.ಆ.೦೬- ದೇವದುರ್ಗ ತಾಲ್ಲೂಕಿನ ಮಲ್ಲೇದೇವರ ಗುಡ್ಡ ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಬಲಮ್ಮ ಗಂ.ಶಾಂತಪ್ಪ ಬಾಗ್ಲಿ ಸಾ.ನಾಗೋಲಿಯವರು ಅವಿರೋಧವಾಗಿ ಆಯ್ಕೆಯಾದರು. ಮಲ್ಲೇದೇವರ ಗುಡ್ಡ ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ಧ ಗ್ರಾಮ ಪಂಚಾಯತ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದರಿಂದ ಅಧ್ಯಕ್ಷರಾದ ಬಸವರಾಜ ನಾಯಕ ಎಂಬುವರು ಅಧಿಕಾರ ಕಳೆದುಕೊಂಡಿದ್ದರು.
ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಬಾಲಮ್ಮ ಗಂ.ಶಾಂತಪ್ಪ ಬಾಗ್ಲಿ ಇವರು ಒಬ್ಬರೇ ನಾಮ ಪತ್ರಸಲ್ಲಿಸಿದ್ದರು. ಮಲ್ಲೇದೇವರ ಗುಡ್ಡ ಗ್ರಾಮ ಪಂಚಾಯತ ಒಟ್ಟು ಸದಸ್ಯರು ೧೪ರ ಪ್ಯಕಿ ೧೩ ಜನ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷಸ್ಥಾನ ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಅಧ್ಯಕ್ಷಸ್ಥಾನಕ್ಕೆ ಬಾಲಮ್ಮ ಗಂಡ ಶಾಂತಪ್ಪ ಬಾಗ್ಲಿ ಇವರು ಒಬ್ಬರೇ ನಾಮಪತ್ರಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿಗಳಾದ ಪಂಪಾಪತಿ ಹಿರೇಮಠ ಇವರು ಅವಿರೋದವಾಗಿ ಆಯ್ಕೆಯಾಗಿದ್ದರೆಂದು ಘೋಷಣೆಮಾಡಿದರು.
ಅಭಿವೃದ್ದಿ ಅಧಿಕಾರಿನಾಗೇಂದ್ರಪ್ಪ ಬಿಜೆಪಿ ಯುವ ಮುಖಂಡರಾದ ಕೆ.ಭಗವಂತ್ರಾಯ ನಾಯಕ,ವಿರೇಶ ನಾಯಕ ಮಲ್ಲೇದೇವರ ಗುಡ್ಡ ಉಪಸ್ಥಿತರಿದ್ದರು.