ಮಲ್ಲೂರು ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ


(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು.25: ತಾಲೂಕಿನ ಮಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪ್ರಕಾಶ ಕುಲ್ಕರ್ಣಿ ಹಾಗೂ ಉಪಾಧ್ಯಕ್ಷರಾಗಿ ರೂಪಾ ಕಾಟೇನಹಳ್ಳಿ ಆಯ್ಕೆಯಾಗಿದ್ದಾರೆ.
ಗ್ರಾಪಂ.ಆಡಳಿತ ಮಂಡಳಿಯಲ್ಲಿ 18 ಸದಸ್ಯರಿದ್ದು ಓರ್ವ ಸದಸ್ಯ ಮೃತರಾದ ಹಿನ್ನೆಲೆಯಲ್ಲಿ ಒಟ್ಟು ಬಲ 17 ಕ್ಕಿಳಿದಿತ್ತು ಸೋ ಮವಾರ ನಡೆದ ಚುನಾವಣೆಯಲ್ಲಿ ತಲಾ 10 ಮತ ಪಡೆದು ಪ್ರಕಾಶ ಕುಲ್ಕರ್ಣಿ ಅಧ್ಯಕ್ಷರಾಗಿ, ಉಪಾಧ್ಯಕ್ಷೆಯಾಗಿ ರೂಪಾ ಕಾಟೇನಹಳ್ಳಿ ಆಯ್ಕೆಯಾದರು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭಾ?Áಸಾಬ್ ಹುಸೇನಸಾಬ್ ದೊಡ್ಮನಿ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರೇಮ ಬಿದರಕಟ್ಟಿ ತಲಾ 7 ಮತಗಳನು ಪಡೆದು ಪರಾಭವಗೊಂಡರು.
ಈ ವೇಳೆ ಚುನಾವಣಾಧಿಕಾರಿ ಪಾರ್ವತಿ ಹುಂಡೇಕರ್ (ಸಿಡಿಪಿಓ), ಮಾಜಿ ಅಧ್ಯಕ್ಷೆ ನೀಲಮ್ಮ ಕುಲ್ಕರ್ಣಿ ಸದಸ್ಯರಾದ ಮರಿಯವ್ವ ಕಡತಿ, ಜಗದೀಶ ಕಟ್ಟೆಪ್ಪನರ, ವಿದ್ಯಾ ಬಿದರಿ, ವಿಠಲ ಜಾಧವ್, ಮಹದೇವಪ್ಪ ಹೊನಕೇರಿ, ಶಹೀನಾಬಾನು ನದಾಫ್, ನಾಗರತ್ನ ವಾಲ್ಮೀಕಿ, ಹುಚ್ಚವ್ವ ಕಡೇಮನಿ, ಮಹ್ಮದರಫೀಕ ಮುಲ್ಲಾ, ಸತೀಶ್ ಕಮ್ಮಾರ, ಶೇಖಪ್ಪ ದ್ಯಾವಣ್ಣ ನವರ, ಪಿಡಿಓ ನಾಗರಾಜ ಹಡಗಲಿ, ಕಾರ್ಯದರ್ಶಿ ಫಕ್ಕೀರಪ್ಪ ಯತ್ನಳ್ಳಿ, ಸಿಬ್ಬಂದಿಗಳಾದ ಪ್ರಕಾಶ ಬಣಕಾರ, ಮಂಜಪ್ಪ ಕುಮ್ಮೂರು ಸೇರಿದಂತೆ ಇನ್ನಿತರರಿದ್ದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.