
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.21: ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದಿಂದ ತಾಲೂಕಿನ ಯರಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂದು ನಡೆದ ಎರ್ರಿಸ್ವಾಮಿ ಸಂಸ್ಮರಣಾ ದತ್ತಿ, ದಿ ಯರಗುಡಿ ನಾರಾಯಣ ರಾವ್ ಸಾವಿತ್ರಮ್ಮ ದತ್ತಿ ಗೋಟೂರ್ ಗ್ರಾಮ, ಕಪ್ಪಗಲ್ಲು ನಬಿಸಾಬ್ ಹೊನ್ನೂರಮ್ಮ ದತ್ತಿ, ಪಂಡಿತ ಟಿ. ಎಮ್. ಬಸವರಾಜ ಶಾಸ್ತ್ರಿಗಳ ಸ್ಮರಣಾರ್ಥ ದತ್ತಿ
ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ ಪಂಪನಗೌಡ ಅವರು ಮಲ್ಲಿಗೆ ಮೂಗಿಗೆ ಸುವಾಸನೆ ಕನ್ನಡ ಭಾಷೆ ಕನ್ನಡ ನಾಡಿಗೆ ಸುವಾಸನೆ ಕನ್ನಡದ ಕಂಪು ಇಂಪಾಗಿಸಲು ಅದರ ಉಳಿವಿಗಾಗಿ ಶ್ರಮಿಸಬೇಕು ಅದು ಪ್ರತಿಯೊಬ್ಬರ ಕರ್ತವ್ಯಕೂಡ ಎಂದರು
ಉಪನ್ಯಾಸ ನೀಡಿದ ರಾಜಶೇಖರ ಅವರು ಪ್ರಕೃತಿಯು ನಮಗೆ ಉಚಿತವಾಗಿ ಏನೆಲ್ಲಾ ನೀಡುತ್ತದೆ ಆದರೆ ನಾವು ನಮ್ಮ ನಡೆ ನುಡಿ ಆಚಾರ ವಿಚಾರ ಸಂಸ್ಕೃತಿಯಿಂದ ಜ್ಞಾನದಿಂದ ಸತ್ಚಾರಿತ್ರ್ಯ ದಿಂದ ಬದುಕಬೇಕು, ಅಂತಹ ಶಿಕ್ಷಣವನ್ನು ಪಡೆದು ಜೀವಿಸಬೇಕೆಂದರು.
ದತ್ತಿ ದಾನಿ ನ್ಯಾಯವಾದಿ ರಂಗನನಾಥರಾವ್ ಕನ್ನಡ ಸಾಹಿತ್ಯ ಪರಿಷತ್ತು ಈ ನೆಲದ ಸೊಗಡನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು
ಹಿಂದೆ ಕನ್ನಡದ ಅಕ್ಷರಗಳನ್ನು ಬರೆಯಲು ಬೆರಳಿನಿಂದ ಉಸುಗಿನಲ್ಲಿ, ನಂತರ ಪಾಟಿಯಲ್ಲಿ ಬಳಪದಿಂದ, ಈಗ ಪೆನ್ನು ಪೇಪರ್ ಬಂದಿದೆ ಏನೇ ಬದಲಾದರೂ ಕನ್ನಡ ಭಾಷೆ ಸಾಹಿತ್ಯದ ಮೂಲಕ ಪಸರಿಸುತ್ತದೆ ಎಂದು ಪ್ರಗತಿಪರ ರೈತ ಯರಗುಡಿ ಹಾವಳಿಗೆ ರಾಮಾಂಜನಿ ಹೇಳಿದರು.
ಬಳ್ಳಾರಿ ಗ್ರಾಮೀಣ ಘಟಕದ ಅಧ್ಯಕ್ಷ ಎ. ಎರ್ರಿಸ್ವಾಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಭಾರತಿ ಬಿ ಪ್ರಾಂಶುಪಾಲರು ಮೊರಾರ್ಜಿ ವಸತಿ ಶಾಲೆ ಯರಗುಡಿ ಹಾಗೂ ಮೆಹತಾಬ್, ಮುಖ್ಯ ಗುರುಗಳು, ಕೆ ಕುಮಾರಸ್ವಾಮಿ ನ್ಯಾಯವಾದಿಗಳು, ಮೋಕ ಹೋಬಳಿ ಘಟಕದ ಅಧ್ಯಕ್ಷ ಆರ್. ಎಂ. ಚಂದ್ರಶೇಖರ, ಕಾರ್ಯದರ್ಶಿ ಕಪ್ಪುಗಲ್ ಬಿ ಚಂದ್ರಶೇಖರ್ ಆಚಾರ್, ಹುಸೇನ್ ಬಾಷಾ, ಇದ್ದರು.
ಕೋಶಾಧ್ಯಕ್ಷ ಎಸ್ ಸತ್ಯನಾರಾಯಣ ನಿರೂಪಿಸಿದರು, ಎಸ್ಆರ್ ಹಿರೇಮಠ್ ಹಾಡಿದರು
ಕೊನಯಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು ನಂತರ ಎಲ್ಲಾ ಮಕ್ಕಳಿಗೆ ಸಿಹಿ ಹಂಚಿ ವಂದಿಸಿದರು